ಕರ್ನಾಟಕ

karnataka

By

Published : Mar 30, 2022, 8:10 PM IST

ETV Bharat / state

ಬಡವರ ವಸತಿ ಯೋಜನೆ ಸಹಾಯಧನ ಹೆಚ್ಚಿಸಲಾಗಿದೆ: ಸಚಿವ ವಿ. ಸೋಮಣ್ಣ

ಸರ್ಕಾರದಿಂದ ವಸತಿ ಯೋಜನೆಯ ಫಲಾನುಭವಿಗಳಿಗೆ 1.20 ಲಕ್ಷ ಸಹಾಯಧನ ನೀಡುತ್ತೇವೆ. ಈ ಮೊದಲು ಇದು 37 ಸಾವಿರ ಇತ್ತು. ಅದನ್ನು ಹೆಚ್ಚಿಸಲಾಗಿದೆ. 6600 ಗ್ರಾಮ ಪಂಚಾಯತ್​ಗಳಿಗೂ ಪರಿಷ್ಕೃತ ದರದ ಕುರಿತು ಪತ್ರ ಬರೆಯಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

housing-minister-v-somanna
ವಸತಿ ಸಚಿವ ವಿ. ಸೋಮಣ್ಣ

ಬೆಂಗಳೂರು: ಬಡವರಿಗೆ ನೀಡುವ ವಸತಿ ಯೋಜನೆಗಳ ಸಹಾಯ ಧನವನ್ನು ಹೆಚ್ಚಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರದಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2017-18ರಿಂದ ಈವರೆಗೂ 2.96 ಲಕ್ಷ ಮನೆಗಳನ್ನು ಆಯ್ಕೆ ಮಾಡಲಾಗಿದೆ. 4 ಲಕ್ಷ ಮನೆಗಳು ವಿವಿಧ ಹಂತದಲ್ಲಿವೆ ಎಂದು ಹೇಳಿದರು.

ವಸತಿ ಸಚಿವ ವಿ. ಸೋಮಣ್ಣ ಮಾತನಾಡಿದರು

ಸರ್ಕಾರ ಫಲಾನುಭವಿಗಳಿಗೆ 1.20 ಲಕ್ಷ ಸಹಾಯಧನ ನೀಡುತ್ತೇವೆ. ಈ ಮೊದಲು ಇದು 37 ಸಾವಿರ ಇತ್ತು. ಅದನ್ನು ಹೆಚ್ಚಿಸಲಾಗಿದೆ. 6600 ಗ್ರಾಮ ಪಂಚಾಯತ್​ಗಳಿಗೂ ಪರಿಷ್ಕೃತ ದರದ ಕುರಿತು ಪತ್ರ ಬರೆಯಲಾಗಿದೆ. ನಗರ ಪ್ರದೇಶದಲ್ಲಿನ ಸಹಾಯ ಧನವನ್ನು 87 ಸಾವಿರದಿಂದ 2 ಲಕ್ಷಕ್ಕೆ, ಬೆಂಗಳೂರಿನಲ್ಲಿ 3 ಲಕ್ಷ ಸಹಾಯ ಧನವನ್ನು ಹೆಚ್ಚಳ ಮಾಡಲಾಗಿದೆ ಎಂದು ಸದನಕ್ಕೆ ತಿಳಿಸಿದರು.

ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ದಕ್ಷಿಣ ಕನ್ನಡ ಭಾಗದಲ್ಲಿ ಸರ್ಕಾರ ಮಾಡುವ ಹೊಸ ಕಾನೂನುಗಳು ತಕ್ಷಣವೇ ಜಾರಿಗೆ ಬರುತ್ತವೆ. ಉಳಿದ ಜಿಲ್ಲೆಗಳಲ್ಲೂ ಇದು ಜಾರಿಯಾಗಬೇಕು. ಫಲಾನುಭವಿಗಳಿಗೆ ನೀಡುವ ಸಹಾಯ ಧನಕ್ಕೆ ಆಸ್ತಿ ಅಡಮಾನ ಪಡೆಯುವುದನ್ನು ರದ್ದುಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮಾರ್ಚ್ ವೇಳೆಗೆ 3.6 ಲಕ್ಷ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು. ಮುಖ್ಯಮಂತ್ರಿಗಳು ಹೊಸದಾಗಿ ಐದು ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ಮಂಗಳವಾರ 1.40 ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡಿದೆ. ಅದು ಸಾಲುವುದಿಲ್ಲ. ಹೆಚ್ಚುವರಿಯಾಗಿ 3 ಲಕ್ಷ ಮನೆ ನೀಡಿ ಎಂದು ಮುಖ್ಯಮಂತ್ರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದರು.

ಫಲಾನುಭವಿಗಳಿಗೆ ನಿಯಮ ಸರಳೀಕರಣ ಮಾಡಲು ವಿಜಲ್ ಆಫ್ ಮತ್ತು ಜಿಪಿಎಸ್ ಎರಡನ್ನು ಮಿಳಿತ ಮಾಡಿ ಇಂದಿರಾ ವಿಜಲ್ ಆಫ್​ ಮಾಡಲಾಗಿದೆ. ಇದರಿಂದ ಸ್ಥಳ ಗುರುತಿಸುವಿಕೆಯನ್ನು ಸರಳೀಕರಣಗೊಳ್ಳಲಿದೆ ಎಂದರು. ಫಲಾನುಭವಿಗಳ ಆಯ್ಕೆಗೆ ಪಾರದರ್ಶಕತೆ ಜಾರಿಗೆ ತರಲಾಗಿದೆ. ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಜಾರಿಗೆ ತರಲಾಗಿದ್ದ ಬೇಲೂರು ಘೋಷಣೆಯಿಂದ ಫಲಾನುಭವಿಗಳ ಆಯ್ಕೆ ಅಧಿಕಾರ ಗ್ರಾಮ ಪಂಚಾಯತ್ ಸದಸ್ಯರಿಗೆ ಇದೆ ಎಂದು ಸಚಿವ ಸೋಮಣ್ಣ ವಿವರಿಸಿದರು.

ಓದಿ:ಅಪರ ಮುಖ್ಯ ಕಾರ್ಯದರ್ಶಿ ಮೂಲಕ ಭೂ ಅವ್ಯವಹಾರ ತನಿಖೆ : ಸಚಿವ ನಿರಾಣಿ

ABOUT THE AUTHOR

...view details