ಬೆಂಗಳೂರು:ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಆಶಾ (30) ನೇಣಿಗೆ ಶರಣಾದ ಮಹಿಳೆ ಎನ್ನಲಾಗಿದೆ.
ಸಂಶಯಪಟ್ಟು ಗಂಡನಿಂದ ಕಿರುಕುಳ: ಬೇಸತ್ತು ಗೃಹಿಣಿ ಆತ್ಮಹತ್ಯೆ - ರಾಜಾಜಿ ನಗರ
ಗಂಡನ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ
ರಾಜಾಜಿ ನಗರದ ಪ್ರಶಾಂತ್ ನಗರದಲ್ಲಿ ಆಶಾ ಮತ್ತು ಪತಿ ಸತೀಶ್ ನೆಲೆಸಿದ್ದರು. ಆದರೆ ಇತ್ತೀಚೆಗೆ ಸತೀಶ್, ಹೆಂಡತಿಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ಅನುಮಾನಪಟ್ಟು ದಿನ ಜಗಳ ಮಾಡುತ್ತಿದ್ದನಂತೆ. ಹೀಗಾಗಿ ಗಂಡನ ಕಿರುಕುಳಕ್ಕೆ ಬೇಸತ್ತು ಇಂದು ಸಂಜೆ 7 ಗಂಟೆಗೆ ಆಶಾ ನೇಣಿಗೆ ಶರಣಾಗಿದ್ದಾರೆ. ಇನ್ನು ವಿಚಾರ ತಿಳಿದು ಆಶಾ ಕುಟುಂಬಸ್ಥರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಸತೀಶ್ ವಿರುದ್ದ ದೂರು ದಾಖಲು ಮಾಡಿದ್ದು, ರಾಜಾಜಿನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.