ನೆಲಮಂಗಲ: ಪರಿಚಯಸ್ಥರ ಮನೆಯಲ್ಲಿ ನಕಲಿ ಕೀ ಬಳಸಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ನಕಲಿ ಕೀ ಬಳಸಿ ಪರಿಚಯಸ್ಥರ ಮನೆಯಲ್ಲಿ ಕಳ್ಳತನ: ಆರೋಪಿಗಳ ಬಂಧನ - ನೆಲಮಂಗಲ ಅಪರಾಧ ಸುದ್ದಿ
ಪರಿಚಯಸ್ಥರ ಮನೆಯಲ್ಲಿ ನಕಲಿ ಕೀ ಬಳಸಿ ಮನೆಗಳ್ಳತನ ಮಾಡಿದ್ದ ಖದೀಮರನ್ನು ನೆಲಮಂಗಲ ಪೊಲೀಸರು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಪರಿಚಯಸ್ಥರ ಮನೆಗಳನ್ನೇ ಟಾರ್ಗೇಟ್ ಮಾಡಿ ಮನೆಗಳ್ಳತನ ಮಾಡುತ್ತಿದ್ದರು. ಇನ್ನು ನಡೆಯುತ್ತಿದ್ದ ಮನೆಗಳ್ಳತನ ಪತ್ತೆ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಎಸ್ಪಿ ಸುಜೀತ್ ಮಾರ್ಗದರ್ಶನದೊಂದಿಗೆ ಸಿಪಿಐ ಶಿವಣ್ಣ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ನೆಲಮಂಗಲ ಪೊಲೀಸರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದಾರೆ. ಬೆಂಗಳೂರಿನ ವೈಯಾಲಿಕಾವಲ್ ವಿಶ್ವನಾಥ್(45) ತಾಲೂಕಿನ ದನೋಜಿಪಾಳ್ಯದ ಹನುಮಂತರಾಜು(34) ಬಂಧಿತ ಆರೋಪಿಗಳಾಗಿದ್ದು, ಅವರಿಂದ 25 ಲಕ್ಷ ಬೆಲೆ ಬಾಳುವ 600ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.ಈ ಬಗ್ಗೆ ನೆಲಮಂಗಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಅತೀ ಶೀಘ್ರವಾಗಿ ಪ್ರಕರಣ ಭೇದಿಸಿದ್ದಕ್ಕೆ ಎಎಸ್ಪಿ ಸುಜೀತ್ ಅವರಿಂದ ಅಪರಾಧ ವಿಭಾಗದ ಸಿಬ್ಬಂದಿಗೆ ಅವಾರ್ಡ್ ಹಾಗೂ ಪ್ರಶಂಸೆ ಪತ್ರ ಕೊಡಲಾಗಿದೆ.