ಬೆಂಗಳೂರು :ನಕಲಿ ಕೀ ಬಳಸಿ ನಿರ್ಮಾಪಕನ ಮನೆಗೆ ಕನ್ನ ಹಾಕಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಆರೋಪಿ ನಿರ್ಮಾಪಕನ ಕಾರು ಚಾಲಕ ಎಂದು ತಿಳಿದು ಬಂದಿದೆ.
ಏನಿದು ಘಟನೆ: ಜುಲೈ 10 ರಂದುಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಪಕ ರಮೇಶ್ ಕಶ್ಯಪ್ ಎಂಬವರ ಮನೆಗೆ ನುಗ್ಗಿದ ಕಳ್ಳರು 3 ಲಕ್ಷ ರೂಪಾಯಿ ನಗದು, 710 ಗ್ರಾಂ. ಚಿನ್ನಾಭರಣ ದೋಚಿದ್ದರು. ಈ ಸಂಬಂಧ ನಿರ್ಮಾಪಕ ಕಶ್ಯಪ್ ಹನುಮಂತನಗರ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಖೆಗಿಳಿದ ಪೊಲೀಸರು ಆರೋಪಿಗಳಾದ ಚಂದ್ರಶೇಖರ್(32), ಅಭಿಷೇಕ್ (34) ಅನ್ನು ಬಂಧಿಸಿದ್ದರು. ಬಂಧಿತರನ್ನು ವಿಚಾರಣೆಗೆ ಒಳಡಿಪಡಿಸಿದಾಗ ಆರೋಪಿ ಚಂದ್ರಶೇಖರ್ ನಿರ್ಮಾಪಕ ಕಶ್ಯಪ್ ಅವರ ಕಾರು ಚಾಲಕ ಎಂಬುದು ಗೊತ್ತಾಗಿದೆ.