ಕರ್ನಾಟಕ

karnataka

ETV Bharat / state

ಯಶ್​ ಬಳಿಕ ನಟ ಆದಿತ್ಯ ಬಾಡಿಗೆ ರಂಪಾಟ..  ದೂರು ದಾಖಲಿಸಿದ ಮನೆ ಮಾಲೀಕ - undefined

ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಅವರು ಮನೆ ಬಾಡಿಗೆ ನೀಡದ ಆರೋಪಕ್ಕೆ ಗುರಿಯಾಗಿದ್ದು, ಈ ಸಂಬಂಧ ಮನೆ ಮಾಲೀಕ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾರೆ. ಮನೆ ಬಾಡಿಗೆ ಕೇಳಿದ್ದಕ್ಕೆ ಆದಿತ್ಯ ಅವರು ತಮ್ಮ ವಿರುದ್ಧ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಟ ಆದಿತ್ಯ

By

Published : May 10, 2019, 4:33 PM IST

Updated : May 10, 2019, 8:05 PM IST

ಬೆಂಗಳೂರು: ಮನೆ ಬಾಡಿಗೆ ನೀಡಿಲ್ಲವೆಂದು ಆದಿತ್ಯ ಅವರು ಮಾಲೀಕ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದುಈ ಸಂಬಂಧ ಮನೆ ಮಾಲೀಕ ಈಗ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಪ್ರತಿ

ಸದಾಶಿವ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್​ಎಮ್​ವಿ ಎಕ್ಸ್​ಟೆನ್ಷನ್​ನಲ್ಲಿರುವ ಪ್ರಸನ್ನ ಎಂಬುವವರು ಮನೆಯಲ್ಲಿ ಕಳೆದ ನಾಲ್ಕು ವರ್ಷದಿಂದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕುಟುಂಬ ವಾಸ ಮಾಡುತ್ತಿದ್ದು, ಆದಿತ್ಯ ಅವರ ಕುಟುಂಬ ಕಳೆದ ಏಳು ತಿಂಗಳಿಂದ ಮನೆ ಬಾಡಿಗೆ ನೀಡದೆ ವಾಸವಾಗಿದ್ದಾರೆ ಎಂದು ಮನೆ ಮಾಲೀಕ ಪ್ರಸನ್ನ ಆರೋಪಿಸುತ್ತಿದ್ದಾರೆ.

ಆದಿತ್ಯ ಮತ್ತು ಮನೆ ಮಾಲೀಕನ ನಡುವಿನ ಗಲಾಟೆ ಆಡಿಯೋ

ಈ ಹಿನ್ನೆಲೆಯಲ್ಲಿ ಬಾಕಿ ಇರುವ 2 ಲಕ್ಷ 88 ಸಾವಿರ ಹಣವನ್ನು ಕೊಡುವಂತೆ ಕೇಳಿದ್ದಾರೆ. ಆದರೆ ಆದಿತ್ಯ ಅವರು ಹಣ ಕೊಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದ್ದು. ‌ಮನೆ ಮಾಲೀಕ ಪ್ರಸನ್ನ ಅವರು ಸಿಟಿ ಸಿವಿಲ್‌ ನ್ಯಾಯಲಯ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮನೆ ಖಾಲಿ ಮಾಡಿಸಿಕೊಳ್ಳುವಂತೆ‌ ದೂರು ದಾಖಲಿಸಿದ್ದಾರೆ.

ಕನ್ನಡ ಚಿತ್ರರಂಗ ನಟರ ಬಾಡಿಗೆ ರಂಪಾಟ ನಡೆಯುತ್ತಿರುವುದು ಇದು ಎರಡನೇ ಸಾರಿ. ನಟ ಯಶ್​ ಅವರು ಬನಶಂಕರಿಯಲ್ಲಿ ತಾವು ವಾಸವಿದ್ದ ಮನೆಗೆ ಬಾಡಿಗೆ ನೀಡಿಲ್ಲವೆಂದು ಮನೆ ಮಾಲೀಕ ದೂರು ನೀಡಿದ್ದರು. ಸದ್ಯ ಈ ಪ್ರಕರಣ ಕೋರ್ಟ್​ನಲ್ಲಿದ್ದು, ನ್ಯಾಯಾಲಯವು ಯಶ್​ ಅವರಿಗೆ ನಿಗದಿತ ದಿನಾಂಕದವರೆಗೆ ಮಾತ್ರ ಆ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿತ್ತು.

Last Updated : May 10, 2019, 8:05 PM IST

For All Latest Updates

TAGGED:

ABOUT THE AUTHOR

...view details