ಬೆಂಗಳೂರು: ಸಾಮಾಜಿಕ ಅಂತರ ಕಾಪಾಡದೆ, ಜನಜಂಗುಳಿಯಿಂದ ತುಂಬಿದ್ದ ರೆಸಿಡೆನ್ಸಿ ರಸ್ತೆಯ ಮೇಘನಾ ಫುಡ್ಸ್ ಹಾಗೂ ಉಡುಪಿ ಪಾರ್ಕ್ ಹೊಟೇಲ್ಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಈಗಾಗಲೇ ಸಿಎಂ ಹೊಟೇಲ್ ರೆಸ್ಟೋರೆಂಟ್ಗಳಲ್ಲಿ ಶೇ. 50ರಷ್ಟು ಮಾತ್ರ ಗ್ರಾಹಕರಿಗೆ ಮಿತಿಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ನಿನ್ನೆಯ ಪಿಎಂ ಜೊತೆಗಿನ ಸಭೆ ಬಳಿಕವೂ ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದ್ದಾರೆ. ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವುದರಿಂದ ಸಾಮಾಜಿಕ ಅಂತರ ಕಾಪಾಡದ ಕಡೆ ಶಟರ್ ಎಳೆದು ಬೀಗ ಹಾಕುತ್ತಿದ್ದಾರೆ.