ಬೆಂಗಳೂರು:ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 4ನೇ ಹಂತದ ಲಾಕ್ಡೌನ್ ಜಾರಿಯಲ್ಲಿದೆ. ಅಲ್ಲದೆ ಸರ್ಕಾರ ಭಾನುವಾರದಂದು ಲಾಕ್ಡೌನ್ ಎಂದು ಘೋಷಿಸಿದೆ. ಇನ್ನು ನಗರದ ಕೆಲವೆಡೆ ಹೋಟೆಲ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಪಾರ್ಸೆಲ್ ಮೂಲಕ ಆಹಾರ ಪೂರೈಕೆ ಮಾಡುತ್ತಿದೆ.
ಬೆಂಗಳೂರಿನಲ್ಲಿ ಕರ್ಪ್ಯೂ ನಡುವೆಯೂ ಹೋಟೆಲ್ಗಳಲ್ಲಿ ಪಾರ್ಸೆಲ್ ಸೇವೆ
ಬೆಂಗಳೂರಿನಲ್ಲಿ ಹೋಟೆಲ್ ಸೇವೆಗಳು ಎಂದಿನಂತೆ ಇದ್ದು, ಜನರಿಗೆ ಪಾರ್ಸೆಲ್ ನೀಡುವ ಮೂಲಕ ಆಹಾರ ಪೂರೈಕೆ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಕರ್ಪ್ಯೂ ನಡುವೆಯೂ ಹೊಟೇಲ್ಗಳು ಓಪನ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಾ ವಹಿವಾಟುಗಳು ಬಂದ್ ಆಗಿದೆ. ಆದರೆ ಜನತಾ ಕರ್ಪ್ಯೂ ಜಾರಿಯಲ್ಲಿ ಇದ್ದರೂ ಸಹ ಹೋಟೆಲ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಹೋಟೆಲ್ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಜನರು ಬಂದು ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದಾರೆ.
ಅಷ್ಟೇ ಅಲ್ಲದೆ, ಜೊಮ್ಯಾಟೊ ಸ್ವಿಗ್ಗಿ ಅನ್ಲೈನ್ ಸರ್ವಿಸ್ ಕೂಡ ಎಂದಿನಂತೆ ಇದೆ.