ಕರ್ನಾಟಕ

karnataka

ETV Bharat / state

ಅನ್ಲಾಕ್​​ ಆದ್ರೂ ತೆರೆಯಲಿಲ್ಲ Hotel​.. ಇಂದಿರಾ Canteen ಫ್ರೀ ಊಟಕ್ಕೆ Break..! - ಬೆಂಗಳೂರಲ್ಲಿ ಹೋಟೆಲ್ ಬಂದ್

ಇಂದು ನಗರದ ಬಹುತೇಕ ಹೋಟೆಲ್​ಗಳ ಬಾಗಿಲು ತೆರೆದಿಲಿಲ್ಲ. ಇನ್ನು ನಗರದ ಹೃದಯಭಾಗ ಮೆಜೆಸ್ಟಿಕ್ ಹೋಟೆಲ್​ಗಳಲ್ಲಿ ಕುಳಿತು ಊಟ ಮಾಡುವ ಅವಕಾಶ ಕಲ್ಪಿಸಿದ್ದರೂ ಸಿಬ್ಬಂದಿ ಕೊರತೆ ಎದುರಾಗಿತ್ತು. ಹೋಟೆಲ್ ಅವಕಾಶ ಅನಿರೀಕ್ಷಿತವಾಗಿದ್ದರಿಂದ ಊರುಗಳಿಗೆ ತೆರಳಿದ್ದ ಬಹುತೇಕ ಸಿಬ್ಬಂದಿ ವಾಪಸ್ ಬಂದಿರಲಿಲ್ಲ.

ಅನ್ಲಾಕ್​​ ಆದ್ರೂ ತೆರೆಯಲಿಲ್ಲ ಹೋಟೆಲ್
ಅನ್ಲಾಕ್​​ ಆದ್ರೂ ತೆರೆಯಲಿಲ್ಲ ಹೋಟೆಲ್

By

Published : Jun 21, 2021, 10:35 PM IST

ಬೆಂಗಳೂರು:ಅನ್ಲಾಕ್ 2.0 ನಲ್ಲಿ ಹೋಟೆಲ್​​ಗಳಲ್ಲಿ ಶೇಕಡಾ 50 ರಷ್ಟು ಜನರು ಕುಳಿತು ಊಟ ಮಾಡಲು ಅವಕಾಶ ನೀಡಲಾಗಿದೆ. ಆದರೂ ಇಂದು ನಗರದ ಬಹುತೇಕ ಹೋಟೆಲ್​ಗಳ ಬಾಗಿಲು ತೆರೆದಿಲಿಲ್ಲ.

ಇನ್ನು ನಗರದ ಹೃದಯಭಾಗ ಮೆಜೆಸ್ಟಿಕ್ ಹೋಟೆಲ್​ಗಳಲ್ಲಿ ಕುಳಿತು ಊಟ ಮಾಡುವ ಅವಕಾಶ ಕಲ್ಪಿಸಿದ್ದರೂ ಸಿಬ್ಬಂದಿ ಕೊರತೆ ಎದುರಾಗಿತ್ತು. ಹೋಟೆಲ್ ಅವಕಾಶ ಅನಿರೀಕ್ಷಿತವಾಗಿದ್ದರಿಂದ ಊರುಗಳಿಗೆ ತೆರಳಿದ್ದ ಬಹುತೇಕ ಸಿಬ್ಬಂದಿ ವಾಪಸ್ ಬಂದಿರಲಿಲ್ಲ.

ಇಂದಿರಾ ಕ್ಯಾಂಟೀನ್ ಉಚಿತ ಊಟ​ ಬಂದ್
ಲಾಕ್ ಡೌನ್ ಸಮಯದಲ್ಲಿ ಹಸಿದ ಹೊಟ್ಟೆಗಳಿಗೆ ಉಚಿತ ಊಟ ನೀಡಿದ್ದ ಇಂದಿರಾ ಕ್ಯಾಂಟೀನ್ ಈಗ ಮತ್ತೆ ಫ್ರೀ ಊಟ ಸ್ಥಗಿತ ಗೊಳಿಸಿದೆ. ಇಂದಿನಿಂದ ಮತ್ತೆ ಹಳೆಯ ದರ ಜಾರಿಗೊಳಿಸಿದೆ. ತಿಂಡಿಗೆ ಐದು ರೂಪಾಯಿ ಹಾಗೂ ಊಟಕ್ಕೆ ಹತ್ತು ರೂಪಾಯಿ ಪಡೆಯುತ್ತಿದೆ. ಆದರೂ ಜನರ ಕ್ಯೂ ಕಡಿಮೆಯಾಗಿರಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲೇ ಜನರು ಊಟ, ತಿಂಡಿಗೆ ಪಡೆದುಕೊಂಡರು.

ABOUT THE AUTHOR

...view details