ಕರ್ನಾಟಕ

karnataka

ETV Bharat / state

ಬೆಂಗಳೂರಿನ ಹೊಸಹಳ್ಳಿ ಹೆರಿಗೆ ಆಸ್ಪತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ - ಗೋವಿಂದರಾಜನಗರ ವಾರ್ಡ್​​

ಬೆಂಗಳೂರಿನ ಗೋವಿಂದರಾಜನಗರ ವಾರ್ಡ್​​ನಲ್ಲಿ ಸ್ಥಾಪಿಸಿರುವ ಹೊಸಹಳ್ಳಿ ಹೆರಿಗೆ ಆಸ್ಪತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.

ddede
ಬೆಂಗಳೂರಿನ ಹೊಸಹಳ್ಳಿ ಹೆರಿಗೆ ಆಸ್ಪತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

By

Published : May 21, 2020, 1:58 PM IST

ಬೆಂಗಳೂರು: ನವ ನಗರೋತ್ಥಾನ ಯೋಜನೆಯಡಿ ನಗರದ ಗೋವಿಂದರಾಜನಗರ ವಾರ್ಡ್​​ನಲ್ಲಿ ಸ್ಥಾಪಿಸಿರುವ ಹೊಸಹಳ್ಳಿ ಹೆರಿಗೆ ಆಸ್ಪತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.

ಬೆಂಗಳೂರಿನ ಹೊಸಹಳ್ಳಿ ಹೆರಿಗೆ ಆಸ್ಪತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

ಇದೇ ವೇಳೆ ಅಗ್ರಹಾರ ದಾಸರಹಳ್ಳಿ ವಾರ್ಡ್​​ನ ಎಂ.ಸಿ ಬಡಾವಣೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ನೀಡಲಾಯಿತು. ಏಳು ಕೋಟಿ ವೆಚ್ಚದಲ್ಲಿ ಇದರ ನಿರ್ಮಾಣವಾಗಿದ್ದು, ಮೂರು ಮಹಡಿ ಆಸ್ಪತ್ರೆ ಇದಾಗಿದೆ. ಆಸ್ಪತ್ರೆಯಲ್ಲಿ ಮೂವತ್ತು ಹಾಸಿಗೆಗಳ ಸುಸಜ್ಜಿತ ವ್ಯವಸ್ಥೆ, ಒಪಿಡಿ ಬ್ಲಾಕ್, ಲ್ಯಾಬ್ ತುರ್ತು ಚಿಕಿತ್ಸೆ ಓಟಿ ಡಯಾಲಿಸಿಸ್ ಸೆಂಟರ್, ಎಕ್ಸ್ ರೇ ಸೌಲಭ್ಯ ಇರಲಿದೆ. 35 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ.

ಈ ಆಸ್ಪತ್ರೆಯಿಂದ ಗೋವಿಂದರಾಜನಗರ ವಾರ್ಡ್ ಸೇರಿ ಸುತ್ತಮುತ್ತಲಿನ ಕಡುಬಡವರಿಗೆ ಉತ್ತಮ ಚಿಕಿತ್ಸೆ ಸಿಗಲಿದೆ. ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಆರ್. ಅಶೋಕ್, ಕೆ.ಗೋಪಾಲಯ್ಯ, ಸಂಸದ ತೇಜಸ್ವಿ ಸೂರ್ಯ, ಮೇಯರ್ ಗೌತಮ್ ಕುಮಾರ್ ಹಾಜರಿದ್ದರು.

ABOUT THE AUTHOR

...view details