ಕರ್ನಾಟಕ

karnataka

ETV Bharat / state

ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸಪೇಟೆ ಬಂದ್​​..

ಸಾರ್ವಜನಿಕರು ಮೂಗಿಗೆ ಮಾಸ್ಕ್ ಹಾಕಿಕೊಂಡು ಕೆಮ್ಮು ಮತ್ತು ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಹಾಗಾಗಿ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ.

Hospet Band
ಮೊದಲ ಬಾರಿಗೆ ಹೊಸಪೇಟೆ ಬಂದ್​​

By

Published : Mar 22, 2020, 5:26 PM IST

ಹೊಸಪೇಟೆ:ಜನತಾ ಕರ್ಫ್ಯೂಗೆ ನಗರದಲ್ಲಿ ಒಳ್ಳೇ ಸ್ಪಂದನೆ ಸಿಕ್ಕಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಂಪೂರ್ಣವಾಗಿ ಹೊಸಪೇಟೆ ಬಂದ್‌ ಆಗಿತ್ತು. ನಗರದಲ್ಲಿ ಜನತಾ ಕರ್ಫ್ಯೂಗೆ ಅಂಗಡಿ-ಮುಂಗಟ್ಟುಗಳು, ಬೀದಿ ಬದಿಯ ವ್ಯಾಪಾರಿಗಳು, ಸಂತೆ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಸ್ಥಳೀಯ ಸಂಘ-ಸಂಸ್ಥೆಗಳು, ಚಿಕನ್-ಮಟನ್ ಅಂಗಡಿಗಳು, ಎಪಿಎಂಸಿ, ಆಟೋಗಳು ಸೇರಿ ಎಲ್ಲರೂ ಜನತಾ ಕರ್ಫ್ಯೂ ಬೆಂಬಲಿಸಿದ್ದಾರೆ. ರೋಟರಿ ವೃತ್ತ, ಗಾಂಧಿ ಸರ್ಕಲ್, ಮೇನ್ ಬಜಾರ್​​, ಎಂ ಜಿ ರೋಡ್, ವಾಲ್ಮೀಕಿ ವೃತ್ತ ಸೇರಿ ನಗರದ ಎಲ್ಲಾ ರಸ್ತೆಗಳನ್ನೂ ಸಂಪೂರ್ಣ ಬಂದ್ ಮಾಡಲಾಗಿತ್ತು.

ಮೊದಲ ಬಾರಿಗೆ ಹೊಸಪೇಟೆ ಬಂದ್​..​

ಕೊರೊನಾ ಬಂದಿರುವ ರೋಗಿಗಳಿಂದ ಜನರು ದೂರವಿರಬೇಕು. ಈ ಸೋಂಕು ಸಾಂಕ್ರಾಮಿಕವಾಗಿದೆ. ಒಬ್ಬರಿಂದ ಮತ್ತೊಬ್ಬರಿಗೆ ಬರಬಾರದು ಎನ್ನುವುದು ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಮೂಗಿಗೆ ಮಾಸ್ಕ್ ಹಾಕಿಕೊಂಡು ಕೆಮ್ಮು ಮತ್ತು ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಹಾಗಾಗಿ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ.

ABOUT THE AUTHOR

...view details