ಹೊಸಕೋಟೆ:ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11ನೇ ವಾರ್ಡ್ನ ಅರುಣ್(ಹರಿ) ಅಧ್ಯಕ್ಷರಾಗಿ, 31 ನೇ ವಾರ್ಡಿನ ಶೋಭಾ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೊಸಕೋಟೆ ನಗರಸಭೆ ಚುನಾವಣೆ: ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ - hoskote
ಹೊಸಕೋಟೆ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11ನೇ ವಾರ್ಡ್ನ ಅರುಣ್(ಹರಿ) ಅಧ್ಯಕ್ಷರಾಗಿ, 31 ನೇ ವಾರ್ಡ್ನ ಶೋಭಾ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೊಸಕೋಟೆ ನಗರಸಭೆಯ 31 ವಾರ್ಡ್ಗಳಿಗೆ ಜನವರಿ ತಿಂಗಳಿನಲ್ಲಿ ಚುನಾವಣೆ ನಡೆದು ಬಿಜೆಪಿಯ 23, ಸ್ವಾಭಿಮಾನಿ ಪಕ್ಷದ 7, ಸ್ವತಂತ್ರ ಅಭ್ಯರ್ಥಿ ಒಬ್ಬರು ಗೆಲುವು ಸಾಧಿಸಿದ್ದರು. ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಇವರ ವಿರುದ್ಧವಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿ ಅರುಣ್ ಕುಮಾರ್ ಆದೇಶ ಹೊರಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷೆಯನ್ನು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅಭಿನಂದಿಸಿ ಮಾತನಾಡಿ ನೂತನವಾಗಿ ಅಧ್ಯಕ್ಷರಾದವರಿಗೆ ನಗರಸಭೆಯಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಭ್ರಷ್ಟಾಚಾರಮುಕ್ತ, ಹಾಗೂ ಪಕ್ಷಾತೀತ ಅಭಿವೃದ್ದಿಗೆ ಶ್ರಮಿಸುವುದರ ಮೂಲಕ ನಗರಸಭೆಯಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು. ಮತದಾರರು ವಿಶ್ವಾಸವಿಟ್ಟು ಬಿಜೆಪಿಗೆ ಬಹುಮತ ಕೊಟ್ಟಿದ್ದಾರೆ. ಮತದಾರರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.