ಕರ್ನಾಟಕ

karnataka

ETV Bharat / state

ಎಂಟಿಬಿಗೆ ಟಕ್ಕರ್​ ನೀಡಲು ಕೈ ಪ್ಲಾನ್... ಹೊಸಕೋಟೆ ಅಖಾಡಕ್ಕೆ ಸಿದ್ದರಾಮಯ್ಯ, ಡಿಕೆಶಿ ಎಂಟ್ರಿ - ಹೊಸಕೋಟೆ ಉಪ ಚುನಾವಣೆ ಪ್ರಚಾರಕ್ಕೆ ಡಿ ಕೆ ಶಿವಕುಮಾರ ಸಿದ್ದರಾಮಯ್ಯ ಸುದ್ದಿ

ಉಪಚುನಾವಣೆಯಲ್ಲಿ ಇಡಿ ರಾಜ್ಯವನ್ನೇ ತನ್ನತ್ತ ಹಿಂತಿರುಗಿ ನೋಡುವಂತಹ ರೀತಿ ಕುತೂಹಲ ಮೂಡಿಸಿರುವ ಕ್ಷೇತ್ರ ಅಂದರೆ ಹೊಸಕೋಟೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್​ಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಾಯಕರು ರೆಡಿಯಾಗಿದ್ದು, ಕ್ಷೇತ್ರದಲ್ಲಿ ಇಂದಿನಿಂದ ಸಿದ್ದರಾಮಯ್ಯ ಮತ್ತು ಡಿಕೆಶಿ ಭರ್ಜರಿ ಪ್ರಚಾಯ ಕೈಗೊಳ್ಳಲಿದ್ದಾರೆ.

ರಾಜ್ಯ ವಿಧಾನಸಭಾ ಉಪ ಚುನಾವಣಾ

By

Published : Nov 24, 2019, 8:41 AM IST

Updated : Nov 24, 2019, 9:58 AM IST

ಹೊಸಕೋಟೆ: ರಾಜ್ಯ ವಿಧಾನಸಭಾ ಉಪ ಚುನಾವಣಾ ಕದನದಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಹೊಸಕೋಟೆ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಒಂದೆಡೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಮೈತ್ರಿ ಸರ್ಕಾರ ಉರುಳಿಸಲು ಕಾರಣರಾಗಿದ್ದ ಎಂಟಿಬಿ ನಾಗರಾಜ್ ಅವರನ್ನು ಕೆಡ್ಡಕ್ಕೆ ಕೆಡವಲು ಕಾಂಗ್ರೆಸ್​ನಲ್ಲಿ ಭರ್ಜರಿ ಪ್ಲಾನ್ ರೆಡಿಯಾಗಿದೆ. ಅಂತೆಯೇ ಇಂದು ಅಖಾಡಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ. ಕೆ ಶಿವಕುಮಾರ ಎಂಟ್ರಿ ಕೊಡುತ್ತಿದ್ದಾರೆ.

ಉಪಚುನಾವಣೆಯಲ್ಲಿ ಇಡೀ ರಾಜ್ಯವನ್ನೇ ತನ್ನತ್ತ ಹಿಂತಿರುಗಿ ನೋಡುವಂತಹ ರೀತಿ ಕುತೂಹಲ ಮೂಡಿಸಿರುವ ಕ್ಷೇತ್ರ ಅಂದರೆ ಹೊಸಕೋಟೆ. ಬಿಜೆಪಿಯಿಂದ ಸ್ಪರ್ಧಿಸಿರುವ ಎಂಟಿಬಿ ನಾಗರಾಜ್​ಗೆ ಟಕ್ಕರ್ ಕೊಡಲು ಕ್ಷೇತ್ರಕ್ಕೆ ಕಾಂಗ್ರೆಸ್​ನ ಪ್ರಬಲ ನಾಯಕರು ಎಂಟ್ರಿ ಕೊಡುತ್ತಿದ್ದಾರೆ. ಕ್ಷೇತ್ರದ ಸೂಲಿಬೆಲೆ ಹೋಬಳಿಯ ಸಂತೆ ಮೈದಾನ, ನಂದಗುಡಿ, ಮೇಡಿ ಮಲ್ಲಸಂದ್ರ ಹಾಗು ಹೊಸಕೋಟೆ ನಗರದ ಮಜ್ಜಿಗೆ ಕುಂಟೆ ಆವರಣದ ಸೇರಿದಂತೆ ಹಲವು ಕಡೆ ಪದ್ಮಾವತಿ ಸುರೇಶ್ ಪರ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

ಇಂದು ಹೊಸಕೋಟೆ ಮೈದಾನಕ್ಕೆ ಟಗರು, ಟ್ರಬಲ್ ಶೂಟರ್​ ಎಂಟ್ರೀ

ಕ್ಷೇತ್ರದಲ್ಲಿ ಇಷ್ಟು ವರ್ಷಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿದ ಬಿಜೆಪಿಯ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಜಾತಿವಾರು ಗೆಲುವಿನ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿದ್ದು, ಎಂಟಿಬಿ ಹಾಗೂ ಪದ್ಮಾವತಿ ಕುರುಬ ಸಮುದಾಯಕ್ಕೆ ಸೇರಿದ್ದು, ಶರತ್ ಬಚ್ಚೇಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ಕುರುಬರ ಹಾಗೂ ಒಕ್ಕಲಿಗರ ಸಮುದಾಯದ ಪ್ರಾಬಲ್ಯ ಹೆಚ್ಚಾಗಿದ್ದು, ಸಿದ್ದರಾಮಯ್ಯ ಹಾಗೂ ಡಿಕೆಶಿ ಆಗಮನದಿಂದ ಅವರ ಸಮುದಾಯದ ವೋಟುಗಳನ್ನು ವಿಭಜನೆ ಮಾಡಿ ಎಂಟಿಬಿಗೆ ಶಾಕ್ ನೀಡಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಹೊಸಕೋಟೆ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಘಟಾನುಘಟಿ ನಾಯಕರ ಎಂಟ್ರಿಯಿಂದ ಕಣ ಮತ್ತಷ್ಟು ರಂಗೇರುತ್ತಿದ್ದು, ಇಂದಿನ ಸಿದ್ದರಾಮಯ್ಯ ಹಾಗೂ ಡಿಕೆಶಿ ಪ್ರಚಾರ ಹೊಸಕೋಟೆ ಬೈ ಎಲೆಕ್ಷನ್ ಫಿವರ್​ನ್ನ ಮತ್ತಷ್ಟು ಹೆಚ್ಚಾಗಿಸಿದೆ.

Last Updated : Nov 24, 2019, 9:58 AM IST

For All Latest Updates

TAGGED:

ABOUT THE AUTHOR

...view details