ಬೆಂಗಳೂರು:ಸಿಎಂ ಯಡಿಯೂರಪ್ಪ ನಿವಾಸಕ್ಕೆ ಅನರ್ಹ ಶಾಸಕ ಡಾ. ಕೆ.ಸುಧಾಕರ್ ಇಂದು ಭೇಟಿ ನೀಡಿ ಮಾತುಕತೆ ನಡೆಸಿದ್ರು. ಈ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಇಂದು ಪಿ.ಸಿ.ಮೋಹನ್ ಅವರು ಸಿಎಂ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ನಾವು ಕೂಡ ಇವ್ರಿಗೆ ಸಾಥ್ ಕೊಟ್ಟಿದ್ದೀವಿ ಅಂದ್ರು.
ಬಲಿಜ ಸಮುದಾಯಕ್ಕೆ ಸಿಎಂ ಬಿಎಸ್ವೈ ನ್ಯಾಯ ದೊರಕಿಸ್ತಾರೆ ಅನ್ನೋ ಭರವಸೆ ಇದೆ: ಅನರ್ಹ ಶಾಸಕ ಸುಧಾಕರ್ - balijasamudayanews
ಅನರ್ಹ ಶಾಸಕ ಡಾ. ಕೆ.ಸುಧಾಕರ್, ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇಂದಿನ ಸಮಾಜದಲ್ಲಿ ಬಲಿಜ ಸಮುದಾಯ ಬಹಳ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಈ ಸಮುದಾಯವನ್ನ ಎಲ್ಲಾ ವಿಚಾರದಲ್ಲಿ 3ಎ ನಿಂದ 2ಎಗೆ ತರಬೇಕು ಅಂತ ಮನವಿ ಮಾಡಿದ್ದೇವೆ. ಆಂಧ್ರ ಪ್ರದೇಶ ಸೇರಿದಂತೆ ಬೇರೆ ರಾಜ್ಯದಲ್ಲೂ ಬಲಿಜ ಸಮಾಜದವರಿದ್ದು, ರಾಜ್ಯದಲ್ಲಿ ಒಟ್ಟು 30 ಲಕ್ಷ ಜನ ಬಲಿಜ ಸಮಾಜದವರು ಇದ್ದಾರೆ. ಅವರಿಗೂ ಪ್ರತಿಯೊಂದು ಕ್ಷೇತ್ರದಲ್ಲಿ ಆದ್ಯತೆ ಸಿಗಬೇಕು. ಜನಪ್ರಿಯರಾಗಿರುವ ಸಿಎಂ ಯಡಿಯೂರಪ್ಪ ನ್ಯಾಯ ದೊರಕಿಸ್ತಾರೆ ಅನ್ನೋ ಭರವಸೆ ನಮಗೆ ಇದೆ ಎಂದ್ರು.
ಹಾಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಆಯ್ಕೆಗೆ ಸುಧಾಕರ್ ಅರ್ಹರಲ್ಲ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಿಚಾರ ಮಾತನಾಡಿ, ಇಲ್ಲಿ ಆ ವಿಚಾರ ಬೇಡ. ಎಲ್ಲಾ ನ್ಯಾಯಲಯದಲ್ಲಿ ನಡೆಯುತ್ತಿದೆ ಎಂದ್ರು.