ಬೆಂಗಳೂರು:ದೊಮ್ಮಲೂರು ವಾರ್ಡ್ನಲ್ಲಿ ಇಂದು ಕೊರೊನಾ ವಾರಿಯರ್ಸ್ಗೆ ಗೌರವ ಸಮರ್ಪಣೆ ಮಾಡಲಾಯಿತು. ದೊಮ್ಮಲೂರು ವಾರ್ಡ್ ಪಾಲಿಕೆ ಸದಸ್ಯ ಲಕ್ಷ್ಮೀ ನಾರಾಯಣ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಪಿಸಿ ಮೋಹನ್, ಮೇಯರ್ ಗೌತಮ್ ಕುಮಾರ್ ಭಾಗಿಯಾಗಿದ್ದರು.
ಮಹಾನಗರದ ವಿವಿಧೆಡೆ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಕೆ - ಮಹಾಮಾರಿ ಕೊರೊನಾ ವಿರುದ್ಧ ಹೋರಾಟ
ಮಹಾಮಾರಿ ಕೊರೊನಾ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್ಗೆ ಬೆಂಗಳೂರಿನಲ್ಲಿ ಸಾರ್ವಜನಿಕರೇ ಸೇರಿ ಗೌರವ ಸಮರ್ಪಣೆ ಮಾಡಿದರು.
ನಗರದ ವಿವಿಧೆಡೆ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಕೆ
ಕೊರೊನಾ ತಡೆಗಟ್ಟಲು ಶ್ರಮಿಸಿದ ಪೌರಕಾರ್ಮಿಕರು, ಪಾಲಿಕೆ ವೈದ್ಯರು, ಪೊಲೀಸರಿಗೆ ಹೂಮಳೆ ಸುರಿಸಿ, ಸನ್ಮಾನ ಮಾಡಲಾಯಿತು. ಅಲ್ಲದೇ ನಗರದ ವಿವಿಧೆಡೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುವರಿಗೂ ಧನ್ಯವಾದ ಸಮರ್ಪಣೆ ಮಾಡಲಾಯಿತು. ಎಸ್ ಆರ್ ನಗರದಲ್ಲಿಯೂ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಲಾಯಿತು. ಸಾರ್ವಜನಿಕರೇ ಸೇರಿ ಸನ್ಮಾನ ಮಾಡಿ ದಿನಸಿ ಕಿಟ್ಗಳನ್ನು ನೀಡಿದರು.