ಬೆಂಗಳೂರು: ಹೊಂಗಸಂದ್ರ ವಾರ್ಡ್ನ ಜನ ಆಶಾ ಕಾರ್ಯಕರ್ತರೊಡನೆ ವಾಗ್ವಾದಕ್ಕೆ ಇಳಿದಿದ್ದು, ರಸ್ತೆಗೆ ಬಂದು ಬೇಜವಾಬ್ದಾರಿ ತೋರುತ್ತಿದ್ದಾರೆ.
ಮನೆಯಿಂದ ಹೊರ ಬರಬೇಡಿ ಎಂದ ಆಶಾ ಕಾರ್ಯಕರ್ತೆಯರೊಂದಿಗೆ ಹೊಂಗಸಂದ್ರ ನಿವಾಸಿಗಳ ವಾಗ್ವಾದ! - ಬೆಂಗಳೂರಿನ ಹೊಂಗಸಂದ್ರ ವಾರ್ಡ್
ಮನೆಯಿಂದ ಹೊರಗೆ ಬರಬೇಡಿ ಎಂದ ಆಶಾ ಕಾರ್ಯಕರ್ತೆಯರೊಂದಿಗೆ ಹೊಂಗಸಂದ್ರ ನಿವಾಸಿಗಳು ವಾಗ್ವಾದ ಕ್ಕಿಳಿದ ಘಟನೆ ನಡೆದಿದೆ.
ರಸ್ತೆಗಿಳೀಬೇಡಿ, ಸಾಮಾನ್ಯ ಜ್ಞಾನ ಇಲ್ವಾ ಎಂದು ಆಶಾ ಕಾರ್ಯಕರ್ತೆಯರು ಕೇಳಿದ್ದಾರೆ. ಇದರಿಂದ ಕೆರಳಿದ ಸ್ಥಳೀಯರು ಹಾಲು ಇಲ್ಲ, ದಿನಸಿ ಇಲ್ಲ ಏನೂ ಮಾಡೋದು ಎಂದು ಗಲಾಟೆ ಆರಂಭಿಸಿದ್ದಾರೆ.
ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ಸ್ಥಳೀಯರು, ಗಂಟೆ ಹತ್ತಾಯ್ತು ತಿಂಡಿ ಮಾಡಿಲ್ಲ. ಅಂಗಡಿಗೆ ಹೋದರೆ ನಮ್ಮನ್ನ ಹತ್ತಿರಕ್ಕೂ ಸೇರಿಸುತ್ತಿಲ್ಲ. ಒಳಗೆ ಏಕೆ ಹೋಗಬೇಕು ಎಂದು ಕಿರಿಕ್ ಮಾಡಿದ್ದಾರೆ. 14 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆ ಬೊಮ್ಮನಹಳ್ಳಿ ವಲಯದ ಹೊಂಗಸಂದ್ರ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಜನರ ಆರೋಗ್ಯ ಕಾಪಾಡಲು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ಮಾತಿನ ಚಕಮಕಿ ಪ್ರಕರಣಗಳು ಮರುಕಳಿಸುತ್ತಿವೆ.