ಬೆಂಗಳೂರು:ನಿನ್ನೆ ಬೊಮ್ಮನಹಳ್ಳಿಯ ಹೊಂಗಸಂದ್ರ ವಾರ್ಡ್ನ ವಿದ್ಯಾಜ್ಯೋತಿ ಕಾಲೊನಿಯಲ್ಲಿ ರಾತ್ರೋರಾತ್ರಿ 174 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಒಂಭತ್ತು ಜನರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಕಾಲೋನಿಯ ಸುತ್ತಮುತ್ತ ನೂರು ಮೀಟರ್ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಹೊಂಗಸಂದ್ರ ಈಗ ಕಂಟೈನ್ಮೆಂಟ್ ಝೋನ್... 470 ಮನೆಗಳಿಗೆ ದಿನಸಿ ವ್ಯವಸ್ಥೆ - 470 ಮನೆಗಳಿಗೆ ದಿನಸಿ ವ್ಯವಸ್ಥೆ
ಬೊಮ್ಮನಹಳ್ಳಿಯ ಹೊಂಗಸಂದ್ರ ವಾರ್ಡ್ನಲ್ಲಿ ಒಂಭತ್ತು ಜನರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಕಾಲೊನಿಯ ಸುತ್ತಮುತ್ತ ನೂರು ಮೀಟರ್ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ದಿನಸಿ ವ್ಯವಸ್ಥೆ
ಕೊರೊನಾ ಸೋಂಕಿತರನ್ನು ಶಿಫ್ಟ್ ಮಾಡಲು ಬಂದಿರುವ ಆರೋಗ್ಯ ಸಿಬ್ಬಂದಿ
ಈ ಪ್ರದೇಶದಲ್ಲಿ 450 ಮನೆಗಳಿದ್ದು, ಯಾರೂ ಹೊರಗೆ ಬಾರದಂತೆ ಎಚ್ಚರ ವಹಿಸಲಾಗಿದೆ. ಅಲ್ಲದೆ ಪ್ರತೀ ಮನೆಗೆ ದಿನಸಿ, ಹಾಲು ಮನೆ ಬಾಗಿಲಿಗೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪ್ರತಿನಿತ್ಯ ಮಾನಿಟರ್ ಮಾಡಲು, ಹೆಲ್ತ್ ಚೆಕಪ್ ಮಾಡಲು ಕ್ರಮ ವಹಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ಸುರೇಶ್ ತಿಳಿಸಿದ್ದಾರೆ.