ಕರ್ನಾಟಕ

karnataka

By

Published : Aug 28, 2019, 5:17 PM IST

ETV Bharat / state

ಸಾಂಕ್ರಾಮಿಕ ರೋಗ ಭೀತಿ: ಉ.ಕ ನೆರೆ ಸಂತ್ರಸ್ತರ ನೆರವಿಗೆ ತೆರಳಿದ 300 ವೈದ್ಯರ ತಂಡ

ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದ ನಂತರ ಇದೀಗ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ .ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗಲು ಹೋಮಿಯೋ ಕೇರ್ ಇಂಟರ್ ನ್ಯಾಷನಲ್​​ನ ನುರಿತ ಹೋಮಿಯೋಪತಿ ವೈದ್ಯರ ತಂಡವೊಂದು ಇಂದು ಉಚಿತ ಚಿಕಿತ್ಸೆ ನೀಡಲು ತೆರಳಿದೆ.

ನೆರೆ ಸಂತ್ರಸ್ತರ ಚಿಕಿತ್ಸೆಗೆ ನೆರವಾಯ್ತು ಹೋಮಿಯೋಕೆರ್ ವೈದ್ಯರ ತಂಡ;ಮೇಯರ್ ಗಂಗಾಂಬಿಕೆ, ಮಲ್ಲಿಕಾರ್ಜುನ್ ಚಾಲನೆ

ಬೆಂಗಳೂರು: ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದ ನಂತರ ಇದೀಗ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗಲು ಹೋಮಿಯೋ ಕೇರ್ ಇಂಟರ್ ನ್ಯಾಷನಲ್​​ನ ನುರಿತ ಹೋಮಿಯೋಪತಿ ವೈದ್ಯರ ತಂಡವೊಂದು ಇಂದು ಉಚಿತ ಚಿಕಿತ್ಸೆ ನೀಡಲು ತೆರಳಿದೆ.

ನೆರೆ ಸಂತ್ರಸ್ತರ ಚಿಕಿತ್ಸೆಗೆ ತೆರಳಿದ ಹೋಮಿಯೋ ಕೇರ್ ವೈದ್ಯರ ತಂಡ

ಉತ್ತರ ಕರ್ನಾಟಕದ ಕಡೆ ಈ ತಂಡ ಪ್ರಯಾಣ ಬೆಳೆಸಿದ್ದು, ಕಾರ್ಯಕ್ರಮಕ್ಕೆ ನಗರದಲ್ಲಿಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ 5 ಸಾವಿರ ಉಚಿತ ನೋಟ್ ಪುಸ್ತಕಗಳನ್ನು ಸಹ ವಿತರಿಸಲಾಯಿತು. ನಂತರ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಹೋಮಿಯೋ ಕೇರ್ ತಂಡ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ.

ಈಗಾಗಲೇ ತೀವ್ರ ತೊಂದರೆಗೆ ಸಿಲುಕಿರುವವರಿಗೆ ಅಡ್ಡಪರಿಣಾಮ ಬೀರದ ಹೋಮಿಯೋಪತಿ ಚಿಕಿತ್ಸೆ ದೊರೆತರೆ ಅವರ ಬದಕು ಇನ್ನಷ್ಟು ಹಸನಾಗುತ್ತದೆ. ಅಲ್ಲಿನ ಜನರಿಗೆ ಮಾನಸಿಕ ಧೈರ್ಯ ತುಂಬುವ ಜತೆಗೆ ತಮ್ಮ ಕುಟುಂಬ ಮತ್ತು ಪರಿಸರದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಚ್ಚರದಿಂದಿರುವಂತೆ ಅರಿವು ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಆರೋಗ್ಯಪೂರ್ಣ ವ್ಯವಸ್ಥೆಯಿದ್ದರೆ ಯಾವುದೇ ಸಮಸ್ಯೆಗಳಿಂದ ತ್ವರಿತವಾಗಿ ಹೊರಬರಲು ಸಾಧ್ಯವಾಗುತ್ತದೆ ಎಂದರು.

ಇನ್ನೂ ಹೋಮಿಯೋ ಕೇರ್ ಇಂಟರ್ ನ್ಯಾಷನಲ್ ಸಂಸ್ಥೆ ಇಂದು ತಜ್ಞ 300 ಮಂದಿ ವೈದ್ಯಕೀಯ ತಂಡವನ್ನು ಉತ್ತರ ಕರ್ನಾಟಕ ಭಾಗಕ್ಕೆ ಕಳಿಸಿದ್ದು, ಈ ತಂಡದಲ್ಲಿ ಮಧುಮೇಹ, ಅರ್ಥರಿಟಿಸ್, ಹಾರ್ಮೋನ್ ಅಸಮತೋಲನ, ಚರ್ಮ ರೋಗ, ಅಲರ್ಜಿ, ಅಸ್ತಮಾ ಪರಿಣಿತ ವೈದ್ಯರು ಇದ್ದಾರೆ.

ABOUT THE AUTHOR

...view details