ಕರ್ನಾಟಕ

karnataka

ETV Bharat / state

ರೋಗಲಕ್ಷಣಗಳಿಲ್ಲದ ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆಗೆ ಬಿಬಿಎಂಪಿ ಚಿಂತನೆ - ಬೆಂಗಳೂರು

ಎಸಿಮ್ಟಮ್ಯಾಟಿಕ್ ರೋಗಿಗಳಿಂದ ಇತರರಿಗೆ ರೋಗ ಹರಡುವುದು ಕಡಿಮೆ. ಇದಕ್ಕೆ ನಿಗದಿತ ಔಷಧಿವಿಲ್ಲದ ಕಾರಣ ದೇಹದ ಇಮ್ಯೂನಿಟಿ ಶಕ್ತಿಯೇ ಸೋಂಕು ನಾಶ ಮಾಡಬೇಕಿದೆ. ಹೀಗಾಗಿ ಮನೆಯಲ್ಲಿದ್ದೇ ಮಲ್ಟಿಇಮ್ಯುೂನಿಟ್ ಟ್ಯಾಬ್ಲೆಟ್ ಪಡೆದು ಗುಣಪಡಿಸಿಕೊಳ್ಳಬಹುದು.

corona
ಕೊರೊನಾ

By

Published : Jun 10, 2020, 12:00 PM IST

ಬೆಂಗಳೂರು: ಅಂತಾರಾಜ್ಯ, ಜಿಲ್ಲೆಯ ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್ ಆಯ್ತು. ಇದೀಗ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೋಂ ಐಸೊಲೇಶನ್ ಪ್ಲ್ಯಾನ್ ನಡೆಯುತ್ತಿದೆ. ರೋಗದ ಗುಣಲಕ್ಷಣವಿಲ್ಲದ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಮನೆಯಲ್ಲೇ‌‌ ಐಸೊಲೇಷನ್ ಮಾಡಿ ಚಿಕಿತ್ಸೆ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಸದ್ಯ ಕೊರೊನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಐಸೊಲೇಷನ್ ವಾರ್ಡ್, ಆಸ್ಪತ್ರೆ ಬೆಡ್​ಗಳ ಅಭಾವ ಸೃಷ್ಟಿಯಾಗಲಿದೆ. ನಿಗದಿತ ಯಾವುದೇ ಔಷಧಿ ಇಲ್ಲದ ಕಾರಣ, ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುವುದರಿಂದ ಚಿಕಿತ್ಸಾ ವೆಚ್ಚ ಹೆಚ್ಚಾಗುತ್ತಿದೆ. ಇತ್ತೀಚೆಗೆ ಅತಿ ಹೆಚ್ಚು ಅಂದರೆ ಶೇ 70 ರಷ್ಟು ಲಕ್ಷಣರಹಿತ ಸೋಂಕಿತರು ಪತ್ತೆಯಾಗ್ತಿರೋ ಕಾರಣ ಸೋಂಕಿತರನ್ನು ಅವರ ಮನೆಯಲ್ಲಿಯೇ ಐಸೊಲೇಷನ್ ಮಾಡಲು ಚಿಂತನೆ ನಡೆಯುತ್ತಿದೆ.

ಎಸಿಮ್ಟಮ್ಯಾಟಿಕ್ ರೋಗಿಗಳಿಂದ ಇತರರಿಗೆ ರೋಗ ಹರಡುವುದು ಕಡಿಮೆ. ಇದಕ್ಕೆ ನಿಗದಿತ ಔಷಧಿ ಇಲ್ಲದ ಕಾರಣ ದೇಹದ ಇಮ್ಯೂನಿಟಿ ಶಕ್ತಿಯೇ ಸೋಂಕು ನಾಶ ಮಾಡಬೇಕಿದೆ. ಹೀಗಾಗಿ ಇದು ಮನೆಯಲ್ಲಿದ್ದೇ ಮಲ್ಟಿಇಮ್ಯೂನಿಟ್ ಟ್ಯಾಬ್ಲೆಟ್ ಪಡೆಯುವುದರ ಮೂಲಕ ಅಥವಾ ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಗುಣಪಡಿಸಿಕೊಳ್ಳಬಹುದಾಗಿದೆ ಎಂದು ಬಿಬಿಎಂಪಿ ಅಧಿಕಾರಿ ಡಾ.ಮನೋರಂಜನ್ ಹೆಗಡೆ ತಿಳಿಸಿದರು.

ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ಹಾಗೂ ನಾನಾ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸೋಂಕು ಕಾಣಿಸಿಕೊಂಡರೆ ಮಾತ್ರ ಆಸ್ಪತ್ರೆಯ ಐಸೊಲೇಷನ್ ವಾರ್ಡ್​ಗೆ ಶಿಫ್ಟ್ ಮಾಡಲು ಪ್ಲಾನ್, ಉಳಿದಂತೆ ಲಕ್ಷಣ ರಹಿತ ಸೋಂಕಿತರಿಗೆ ಅವರ ಅವರ ಮನೆಗಳಲ್ಲಿಯೇ ಐಸೊಲೇಷನ್ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಪಾಲಿಕೆ ಅಧಿಕಾರಿ ತಿಳಿಸಿದರು.

ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಕುಟುಂಬಸ್ಥರು ಮನೆಯಿಂದ ಹೊರ ಬರುವಂತಿಲ್ಲ. ಆ ಇಡೀ ಮನೆಯನ್ನ ಕಂಟೇನ್ಮೆಂಟ್ ಮಾಡಲಾಗುತ್ತೆ. ಮನೆ ಬಳಿ ಪೊಲೀಸ್ ಸಿಬ್ಬಂದಿ ಅಥವಾ ಬಿಬಿಎಂಪಿ ಸಿಬ್ಬಂದಿಯನ್ನ ನೇಮಕ ಸಾಧ್ಯತೆ‌ ಇದ್ದು, ನಿತ್ಯ ವೈದ್ಯರ ತಂಡದಿಂದ ದೂರವಾಣಿ ಮೂಲಕವೇ ಸೋಂಕಿತನ ಹಾಗೂ ಆತನ ಕುಟುಂಬಸ್ಥರ ಆರೋಗ್ಯದ ಮೇಲೆ ನಿಗಾವಹಿಸಿ, ಅವಶ್ಯಕತೆ ಬಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ಬಗ್ಗೆ ಚಿಂತಿಸಲಾಗಿದೆ. ರಾಜೀವ್ ಗಾಂಧಿಯಲ್ಲಿ ಸೀರಿಯಸ್ ಇರುವ ರೋಗಿಗಳಿಗೆ 100 ಬೆಡ್, ಕೆಸಿ ಜನರಲ್​ನಲ್ಲಿ 40 ಬೆಡ್, ಬೌರಿಂಗ್​ನಲ್ಲಿ ಮಾತ್ರ 40 ಐಸೊಲೇಷನ್ ಬೆಡ್​ಗಳಿವೆ. ಹೀಗಾಗಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಆರೋಗ್ಯ ಇಲಾಖೆ ಮನೆಯಲ್ಲೇ ಟ್ರೀಟ್​ಮೆಂಟ್​ ಮುಂದುವರಿಸುವ ಯೋಚನೆ ನಡೆಸುತ್ತಿದೆ.

ABOUT THE AUTHOR

...view details