ಬೆಂಗಳೂರು: ಕೊರೊನಾ ನಿಯಂತ್ರಣ ಸಲುವಾಗಿ ಕೊರೊನಾ ವಾರಿಯರ್ಸ್ ಮನೆ-ಮನೆ ಸರ್ವೇ ಮಾಡುತ್ತಿದ್ದು, ಈವರೆಗೆ 1 ಕೋಟಿ 13 ಲಕ್ಷದ 38 ಸಾವಿರದ 300 ಮನೆಗಳ ( 1,13,38,300) ಸರ್ವೇ ಕಾರ್ಯ ಮುಗಿಸಿದ್ದಾರೆ.
ದಿನೇ-ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದ್ದು, ಜೊತೆಗೆ ಸೋಂಕಿತರ ಸಂಪರ್ಕದಲ್ಲಿ ಇರುವವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಕೊರೊನಾ ಸೋಂಕಿತರ ಪತ್ತೆ ಕಾರ್ಯ ಮಾಡುವುದರಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯಾಧಿಕಾರಿಗಳ ಪಾತ್ರ ಬಹಳ ದೊಡ್ಡದು. ಕೊರೊನಾ ಸಮುದಾಯದ ಹಂತಕ್ಕೆ ಹರಡಿದರೆ ಯಾರಿಗೆ ಹೆಚ್ಚು ಅಪಾಯವಿದೆ ಎಂದು ನೋಡಿದರೆ ಅದರಲ್ಲಿ ಮನೆ ಮನೆ ಸರ್ವೇ ಮಾಡುವವರು ಮೊದಲ ಸ್ಥಾನದಲ್ಲಿ ಬರುತ್ತಾರೆ.
ಹೌದು, ರಾಜ್ಯದಲ್ಲಿ ಹೈ ರಿಸ್ಕ್ ಕೇಸ್ಗಳ ಸಂಖ್ಯೆ ಕಡಿಮೆಯೇನಿಲ್ಲ. ಹಿರಿಯ ನಾಗರಿಕರು, ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಬಾಣಂತಿಯರ ಸಂಖ್ಯೆ ಹೆಚ್ಚಾಗಿಯೇ ಇದೆ. ರಾಜ್ಯದಲ್ಲಿ ಆಶಾ ಕಾರ್ಯಕರ್ತರು ಶೇ. 67 ರಷ್ಟು ಮನೆಗಳ ಸರ್ವೇ ಕಾರ್ಯ ಮಾಡಿದ್ದಾರೆ. ಅಂದರೆ ಬರೋಬ್ಬರಿ 60,000 ಕೊರೊನಾ ವಾರಿಯರ್ಸ್ 1 ಕೋಟಿ 13 ಲಕ್ಷದ 38 ಸಾವಿರದ 300 ಮನೆಗಳ(1,13,38,300) ಸರ್ವೇ ಕಾರ್ಯ ಮಾಡಿದ್ದಾರೆ.
ಆರೋಗ್ಯ ಇಲಾಖೆಯ ಅಂಕಿ ಅಂಶ:ಹೈ ರಿಸ್ಕ್ ಕೇಸ್ ಎಷ್ಟು ಅಂತಾ ನೋಡೋದಾದರೆ,
*SARI-ILI: (SARI- SERVER ACUTE RESPIRATORY INFECTION) (ILI -INFLUENZA LIKE ILLNESS)ಈ ಲಕ್ಷಣ ಇರುವವರು 13,341 ಮಂದಿ ಇದ್ದಾರೆ.