ಬೆಂಗಳೂರು:ಹೋಂ ಕ್ವಾರಂಟೈನ್ನಲ್ಲಿ ಇರಬೇಕಾದ ವ್ಯಕ್ತಿ ಹೊರಗಡೆ ಬಂದು ಬೀದಿ ಬೀದಿ ಸುತ್ತಾಡಿರುವುದು ಕುರುಬರಹಳ್ಳಿ ಜನರಲ್ಲಿ ಆತಂಕ ಮೂಡಿಸಿದೆ.
ಹೋಂ ಕ್ವಾರಂಟೈನ್ನಲ್ಲಿ ಇರಬೇಕಿದ್ದ ವ್ಯಕ್ತಿ ಬೀದಿಯಲ್ಲಿ ಸುತ್ತಾಟ: ಆತಂಕದಲ್ಲಿ ಕುರುಬರಹಳ್ಳಿ ಜನ - ಕೊವಿಡ್-19
ಮಹಾನಗರದ ಕುರುಬರಹಳ್ಳಿಯಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇರಬೇಕಿದ್ದ ಬೀದಿಯಲ್ಲಿ ಸುತ್ತಾಡುತ್ತಿದ್ದಾನೆ. ಈತನನ್ನು ಕಂಡಿರುವ ಸಾರ್ವಜನಿಕರು ಕೊರೊನಾ ಸೋಂಕಿನ ಭೀತಿ ಎದುರಿಸುತ್ತಿದ್ದಾರೆ. ಸದ್ಯ ಸಾರ್ವಜನಿಕರ ಮಾಹಿತಿ ಮೇರೆಗೆ ಬಿಬಿಎಂಪಿಯವರು ವ್ಯಕ್ತಿಯನ್ನು ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆಗೆ ಕಳಿಸಿದ್ದಾರೆ.
ಬೆಂಗಳೂರು ಹೋಮ್ ಕ್ವಾರಂಟೈನ್ ವ್ಯಕ್ತಿ
ಕುರುಬರಹಳ್ಳಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕೈಗೆ ಹಾಕಿದ್ದ ಸೀಲ್ ಗಮನಿಸಿದ್ದ ಸಾರ್ವಜನಿಕರು ಕೊರೊನಾ ಶಂಕಿತನನ್ನ ಕಂಡು ದಂಗಾಗಿದ್ದಾರೆ. ನಗರದ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಕುಳಿತಿದ್ದ ಶಂಕಿತ ಜನರಲ್ಲಿ ಆತಂಕ ಮೂಡಿಸಿದ್ದಾನೆ.
ನಂತರ ಜನರು ಬಿಬಿಎಂಪಿಗೆ ವಿಷಯ ತಿಳಿಸಿದ್ದು, ಬಳಿಕ ಆತನನ್ನ 108 ಆ್ಯಂಬುಲೆನ್ಸ್ ಮೂಲಕ ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇಂದು ಇಡೀ ಕುರುಬರಹಳ್ಳಿ ರಸ್ತೆಗಳಲ್ಲಿ ಔಷಧಿ ಸಿಂಪಡಿಸುವ ಮೂಲಕ ಬಿಬಿಎಂಪಿ ಸಿಬ್ಬಂದಿ ಕುರುಬರಹಳ್ಳಿ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದಾರೆ.