ಕರ್ನಾಟಕ

karnataka

ETV Bharat / state

ಗಂಟೆಗೊಮ್ಮೆ ಸೆಲ್ಫಿ ಕಳುಹಿಸಿ: ಹೋಮ್​​ ಕ್ವಾರಂಟೈನ್​ನಲ್ಲಿ ಇರುವವರಿಗೆ ಆರೋಗ್ಯ ಇಲಾಖೆ ನೋಟಿಸ್​​​​ - ಆರೋಗ್ಯ ಇಲಾಖೆ ನೋಟಿಸ್​

ಹೋಮ್ ಕ್ವಾರಂಟೈನ್​​ನಲ್ಲಿ ಇರುವವರು ಇನ್ಮುಂದೆ ಗಂಟೆಗೊಮ್ಮೆ ಮನೆಯಿಂದಲೇ ಸೆಲ್ಫಿ ತೆಗೆದು ಕಳಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Health department notice.
ಗಂಟೆಗೊಮ್ಮೆ ಮನೆಯಿಂದ ಸೆಲ್ಫಿ ಕಳುಹಿಸಿ : ಹೋಮ್ ಕ್ವಾರಂಟೈನ್​ನಲ್ಲಿರುವವರಿಗೆ ನೋಟಿಸ್​

By

Published : Mar 30, 2020, 8:44 PM IST

Updated : Mar 30, 2020, 11:12 PM IST

ಬೆಂಗಳೂರು: ಹೋಮ್ ಕ್ವಾರಂಟೈನ್​​ನಲ್ಲಿ ಇರುವವರು ಇನ್ಮುಂದೆ ಗಂಟೆಗೊಮ್ಮೆ ಮನೆಯಿಂದಲೇ ಸೆಲ್ಫಿ ತೆಗೆದು ಕಳಿಸಬೇಕು. ಈ ಮೂಲಕ ಹೋಮ್ ಕ್ವಾರಂಟೈನ್​ನಲ್ಲಿ ಇರುವವರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.‌‌

ಹೋಮ್ ಕ್ವಾರಂಟೈನ್​ನಲ್ಲಿರುವವರಿಗೆ ಆರೋಗ್ಯ ಇಲಾಖೆಯಿಂದ ನೋಟಿಸ್​

ಹೋಮ್ ಕ್ವಾರಂಟೈನ್​​ನಲ್ಲಿ ಇರುವವರು ತಮ್ಮ ಮನೆಯಿಂದ ಸೆಲ್ಫಿ ಕಳಿಸಬೇಕು. ಆ ಸೆಲ್ಫಿಯಿಂದ ಅವರ ದೂರವಾಣಿ ಜಿಪಿಎಸ್ ಮೂಲಕ ಅವರ ಕೋಆರ್ಡಿನೇಟ್ಸ್ ಟ್ರ್ಯಾಕ್​ ಮಾಡಲಾಗುತ್ತದೆ.‌ ಇದರಿಂದ ಅವರು ಮನೆಯಲ್ಲೇ ಇದ್ದಾರಾ, ಇಲ್ವಾ ಎಂಬುದು ಇಲಾಖೆಗೆ ತಿಳಿಯಲಿದೆ.‌‌ ಇಲಾಖೆಯ ವಾಚ್ ಮೊಬೈಲ್ ಆ್ಯಪ್ ಮೂಲಕ ಗಂಟೆಗೊಮ್ಮೆ ಸೆಲ್ಫಿ ತೆಗೆದು ಕಳುಹಿಸಬೇಕು. ಒಂದು ವೇಳೆ ಸೆಲ್ಫಿ ಕಳುಹಿಸಿಲ್ಲ ಎಂದರೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ರಾತ್ರಿ 10ರಿಂದ ಬೆಳಗ್ಗೆ 7ರವರೆಗೆ ಮಲಗಿರುವ ಸಂದರ್ಭ ಬಿಟ್ಟು ಉಳಿದ ಸಮಯದಲ್ಲಿ ಸೆಲ್ಫಿ ಕಡ್ಡಾಯ ಎಂದು ತಿಳಿಸಲಾಗಿದೆ.

ಹೋಮ್ ಕ್ವಾರಂಟೈನ್​ನಲ್ಲಿ ಇರುವವರು ಬೇರೆ ಫೋಟೊ ಕಳುಹಿಸಿದರೆ, ಮಾಸ್ ಕ್ವಾರಂಟೈನ್​ಗೆ ಸ್ಥಳಾಂತರ ಮಾಡಲಾಗುವುದು ಎಂದು ಎಚ್ಚರಿಕೆ ಸಹ ನೀಡಿದೆ.

Last Updated : Mar 30, 2020, 11:12 PM IST

ABOUT THE AUTHOR

...view details