ಕರ್ನಾಟಕ

karnataka

ETV Bharat / state

ಕೊರೊನಾ ವರದಿ ಬರುವವರೆಗೂ ಹೋಂ ಕ್ವಾರಂಟೈನ್ ಆಗದಿದ್ದರೆ ಕಠಿಣ ಕ್ರಮ: ಸುಧಾಕರ್ - ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್

ಕೋವಿಡ್ ಪರೀಕ್ಷೆಗಾಗಿ ಸ್ವಾಬ್ ಸ್ಯಾಂಪಲ್ ನೀಡಿರುವ ವ್ಯಕ್ತಿಗಳು ಪರೀಕ್ಷಾ ವರದಿ ಬರುವವರೆಗೂ ಕಡ್ಡಾಯವಾಗಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು. ವರದಿಗೂ ಮುನ್ನ ಹೋಂ ಕ್ವಾರಂಟೈನ್ ರೀತಿ ಒಂದು ವೇಳೆ ಅಂತಹ ವ್ಯಕ್ತಿಗಳು ಜವಾಬ್ದಾರಿ ಮರೆತು ಹೊರಗೆ ಹೋದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

home-quarantine-must-until-corona-report-minister-sudhakar
ಸುಧಾಕರ್

By

Published : Jul 14, 2020, 4:22 AM IST

ಬೆಂಗಳೂರು:ಇನ್ಮುಂದೆ ಕೊರೊನಾ ತಪಾಸಣೆ ಮಾಡಿಸಿಕೊಂಡವರು ವರದಿ ಬರುವ ಮುನ್ನವೇ ಮನೆಯಿಂದ ಹೊರಗೆ ಹೋಗುವಂತಿಲ್ಲ, ಹಾಗೊಂದು ವೇಳೆ ಹೋಗಬೇಕು ಅಂತಾ ಇದ್ರೆ ಮೊದಲು ಯೋಚಿಸಿ, ಯಾಕಂದ್ರೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲು ಸಿದ್ದವಾಗಿ ಕುಳಿತಿದೆ.

ಆದೇಶ ಪ್ರತಿ

ಹೌದು, ರಾಜ್ಯದಲ್ಲಿ ಎಷ್ಟೇ ಲ್ಯಾಬ್​ಗಳನ್ನು ಹೊಸದಾಗಿ ಆರಂಭಿಸಿದರೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳದಿಂದ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿದೆ. ಕೊರೊನಾ ಶಂಕಿತ ವ್ಯಕ್ತಿ ಪರೀಕ್ಷೆಗೆ ಒಳಪಟ್ಟರೂ ವರದಿ ಬರಲು ನಾಲ್ಕೈದು ದಿನವಾಗಲಿದೆ. ಅಷ್ಟರಲ್ಲಿ ಆ ವ್ಯಕ್ತಿ ಹತ್ತಾರು ಕಡೆ ಓಡಾಟ ನಡೆಸಿ ಹಲವರ ಸಂಪರ್ಕ ಮಾಡಿರುತ್ತಾರೆ. ಇದರಿಂದ ಸೋಂಕು‌ ಹೆಚ್ಚುತ್ತಲೇ ಹೋಗುತ್ತಿದೆ. ಏನೇ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ, ಈಗ ಇದಕ್ಕೆ ಬ್ರೇಕ್ ಹಾಕಲು ಕಠಿಣ ನಿಯಮ ಜಾರಿಗೆ ಸರ್ಕಾರ ಮುಂದಾಗಿದೆ.

ಕೋವಿಡ್ ಪರೀಕ್ಷೆಗಾಗಿ ಸ್ವಾಬ್ ಸ್ಯಾಂಪಲ್ ನೀಡಿರುವ ವ್ಯಕ್ತಿಗಳು ಪರೀಕ್ಷಾ ವರದಿ ಬರುವವರೆಗೂ ಕಡ್ಡಾಯವಾಗಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು. ವರದಿಗೂ ಮುನ್ನ ಹೋಂ ಕ್ವಾರಂಟೈನ್ ರೀತಿ ಒಂದು ವೇಳೆ ಅಂತಹ ವ್ಯಕ್ತಿಗಳು ಜವಾಬ್ದಾರಿ ಮರೆತು ಹೊರಗೆ ಹೋದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

ಶಂಕಿತರು ಪರೀಕ್ಷಾ ವರದಿ ಬರುವ ಮುನ್ನ ಓಡಾಡಿದರೆ ಸೋಂಕು ಹರಡುವ ಅಪಾಯ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಒಂದು ವೇಳೆ ನಿಯಮ ಮೀರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು‌ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details