ಕರ್ನಾಟಕ

karnataka

ETV Bharat / state

ಮೆಟ್ರೋ ಕಾಮಗಾರಿ ವೇಳೆ ತೆರೆದ ಬಾವಿ ನಿರ್ಮಾಣ: ಬಿಎಂಆರ್‌ಸಿಎಲ್‌ ವಿರುದ್ಧ ಆಕ್ರೋಶ - ಬಿಎಂ.ಆರ್.ಸಿ.ಎಲ್ ವಿರುದ್ಧ ಮನೆಯ ಓನರ್ ಗರಂ:

ಮೆಟ್ರೋ ಕಾಮಗಾರಿಯ ಸ್ಥಳದಲ್ಲಿ ಭಾರಿ ಹಳ್ಳ ಉಂಟಾಗಿದ್ದು, ಸಮೀಪದ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಮನೆಯ ಮಾಲೀಕರೊಬ್ಬರು ಬಿ.ಎಂ.ಆರ್.ಸಿ.ಎಲ್ ವಿರುದ್ಧ ಕಿಡಿಕಾರಿದ್ದಾರೆ.

Home owner spark against BMRCL
BMRCL ವಿರುದ್ಧ ಮನೆಯ ಓನರ್ ಗರಂ

By

Published : Sep 30, 2021, 3:33 PM IST

Updated : Sep 30, 2021, 3:41 PM IST

ಬೆಂಗಳೂರು: ಟ್ಯಾನರಿ ರಸ್ತೆಯ ನಮ್ಮ ಮೆಟ್ರೋ ಕಾಮಗಾರಿಯ ಸ್ಥಳದಲ್ಲಿ ಆಗಿರುವ ಅನಾಹುತದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು ತೆರೆದ ಬಾವಿ ಮುಚ್ಚಲು ಲಾರಿಗಳ ಮೂಲಕ ಮಣ್ಣು ತಂದು ಹಾಕುತ್ತಿದ್ದಾರೆ. 15ಕ್ಕೂ ಹೆಚ್ಚು ಸಿಬ್ಬಂದಿ/ಕಾರ್ಮಿಕರು ಬಾವಿ ಮುಚ್ಚಲು ಹರಸಾಹಸ ಪಡುತ್ತಿದ್ದಾರೆ. ಎಷ್ಟು ಮಣ್ಣು ಸುರಿದರೂ ಬಾವಿ ಮುಚ್ಚುತ್ತಿಲ್ಲ. ಈವರೆಗೆ ಎರಡು ಲೋಡ್ ಮಣ್ಣು ತರಿಸಿದ ಬಿ.ಎಂ.ಆರ್.ಸಿ.ಎಲ್ ಸಂಸ್ಥೆ ಬಾವಿ ಮುಚ್ಚಲು ಹೆಣಗಾಡುತ್ತಿದೆ.

ಬಿಎಂಆರ್‌ಸಿಎಲ್‌ ವಿರುದ್ಧ ಆಕ್ರೋಶ

ಬಿ.ಎಂ.ಆರ್.ಸಿ.ಎಲ್ ವಿರುದ್ಧ ಆಕ್ರೋಶ:

ಬಿ.ಎಂ.ಆರ್.ಸಿ.ಎಲ್ ವಿರುದ್ಧ ಮನೆಯ ಮಾಲೀಕ ಝಬೀ ಗರಂ ಆಗಿದ್ದಾರೆ. 'ಕಳೆದ ಒಂದು ತಿಂಗಳ ಹಿಂದೆ ಬಾವಿಯನ್ನ ಮುಚ್ಚಿದ್ದರು. ಈಗ ನೋಡಿದರೆ ಹೀಗಾಗಿದೆ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ನಿನ್ನೆ ರಾತ್ರಿ ಮನೆ ಎಲ್ಲಾ ವೈಬ್ರೆಟ್ ಆಗಿದೆ ಎಂದು ನಮ್ಮ ಮನೆಯವರು ಆತಂಕದಲ್ಲಿದ್ದಾರೆ. ಬೆಳಗ್ಗೆ ನೋಡಿದರೆ ಬಾವಿ ಕುಸಿತ ನೋಡಿ ಶಾಕ್ ಆಯಿತು. ನಾವು ಮನೆಯಲ್ಲಿರಲು ಆಗುತ್ತಿಲ್ಲ, ಯಾವಾಗಲು ಮಿಷನ್ ಸೌಂಡ್ ಕೇಳಿಸುತ್ತಾ ಇರುತ್ತದೆ' ಎಂದು ಆಕ್ರೋಶ ಹೊರಹಾಕಿದರು.

'ನಮ್ಮ ಹುಡುಗರು ಈ ಮನೆಯಲ್ಲಿದ್ದರು. ವೈಬ್ರೆಟ್ ಆಗುತ್ತಿದ್ದ ಕಾರಣ ರಾತ್ರಿ ಮನೆಯಿಂದ ಹೊರ ಬಂದಿದ್ದಾರೆ. ನಾವು ಇನ್ನು ಮುಂದೆ ಈ ಮನೆಯಲ್ಲಿ ಇರೋಲ್ಲ. ಬಿ.ಎಂ.ಆರ್.ಸಿ.ಎಲ್ ನವರೇ ನಮ್ಮ ಮನೆಯನ್ನು ಖರೀದಿ ಮಾಡಬೇಕು. ಯಾರಿಗಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡುವುದು' ಎಂದು ಝಬೀ ಆತಂಕ ವ್ಯಕ್ತಪಡಿಸಿದರು.

Last Updated : Sep 30, 2021, 3:41 PM IST

ABOUT THE AUTHOR

...view details