ಬೆಂಗಳೂರು: ಗ್ರಾಮೀಣದಲ್ಲಾಗಲಿ, ನಗರದಲ್ಲಾಗಲಿ ಬಿಜೆಪಿ ಪಕ್ಷ ಜನರ ಮನಸ್ಸಿನಲ್ಲಿ ಇರುವುದು ಸ್ಪಷ್ಟವಾಗಿದ್ದು, ನಮ್ಮ ಕೆಲಸಕ್ಕೆ ಜನ ಮನ್ನಣೆ ಕೊಟ್ಟಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಎಸ್ವೈ 'ಕೈ' ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ: ಬೊಮ್ಮಾಯಿ - ಗೃಹ ಸಚಿವ ಬಸವರಾಜ ಬೊಮ್ಮಾಯಿ
ವಿಪಕ್ಷದವರ ಮಾತು ಹಸಿ ಸುಳ್ಳು ಅಂತಾ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಅದರಲ್ಲಿ ಇಬ್ಬರು ಸೇರಿ ಪ್ರಯಾಣ ಮಾಡ್ತಿದ್ದಾರೆ. ಇಬ್ಬರು ಸೇರಿಯೇ ಮುಳುಗುತ್ತೇವೆ ಅಂತಾ ಅವರಿಬ್ಬರಿಗೂ ಗೊತ್ತಿದೆ. ಆದರೆ ದಾರಿ ತಪ್ಪಿಸಲು ನಮ್ಮ ಪಕ್ಷದ ನಾಯಕರ ಬಗ್ಗೆ ಹೇಳುತ್ತಿದ್ದಾರೆ. ಈಗ ನೀರು ಅವರ ಬುಡಕ್ಕೆ ಬಂದಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಸಿಎಂ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಪಕ್ಷದವರ ಮಾತು ಹಸಿ ಸುಳ್ಳು ಅಂತಾ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಅದರಲ್ಲಿ ಇಬ್ಬರು ಸೇರಿ ಪ್ರಯಾಣ ಮಾಡ್ತಿದ್ದಾರೆ. ಇಬ್ಬರು ಸೇರಿಯೇ ಮುಳುಗುತ್ತೇವೆ ಅಂತಾ ಅವರಿಬ್ಬರಿಗೂ ಗೊತ್ತಿದೆ. ಆದರೆ ದಾರಿ ತಪ್ಪಿಸಲು ನಮ್ಮ ಪಕ್ಷದ ನಾಯಕರ ಬಗ್ಗೆ ಹೇಳುತ್ತಿದ್ದಾರೆ. ಈಗ ನೀರು ಅವರ ಬುಡಕ್ಕೆ ಬಂದಿದೆ ಎಂದು ವ್ಯಂಗ್ಯವಾಡಿದರು.
ಮುಂದಿನ ಉಪಚುನಾವಣೆಗಳಲ್ಲಿ ಕೂಡಾ ಬಿಜೆಪಿ ಗೆಲುವು ಸಾಧಿಸಲಿದೆ. ಮುಂದಿನ ಉಪಚುನಾವಣೆಯಲ್ಲಿ ಜನ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದ್ದರು. ವಿಧಾನಸಭೆಯಲ್ಲಿ ಯಡಿಯೂರಪ್ಪ ವಿಪಕ್ಷ ನಾಯಕರ ಆರೋಪಕ್ಕೆ ಒಂದೇ ಉತ್ತರ ಕೊಟ್ಟಿದ್ದರು. ಅಂದು ವಿಧಾನಸಭೆಯಲ್ಲಿ ಗುಡುಗಿದ ಯಡಿಯೂರಪ್ಪ ಇಂದು ಜಯಭೇರಿ ಹೊಡೆದು ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ ಎಂದರು.
ಇಡೀ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲೂ ಇರಲಿದೆ. ಯಾರೋ ಆರೋಪ ಮಾಡಿದ ಕೂಡಲೇ ಅದು ಸತ್ಯ ಅಲ್ಲ ಎಂದು ಹೇಳಿದರು.