ಆನೇಕಲ್: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಂಬಂಧಿಕರೊಬ್ಬರು ಹೃದಯ ಸಂಬಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸುಧಾರಣೆ ಕುರಿತು ನಾರಾಯಣ ಹೃದಯಾಲಯಕ್ಕೆ ಭೇಟಿ ನೀಡಿದರು.
ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲು ನಾರಾಯಣ ಹೃದಯಾಲಕ್ಕೆ ಗೃಹ ಸಚಿವರ ಭೇಟಿ - Home Minister
ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಾರಾಯಣ ಹೃದಯಾಲಯಕ್ಕೆ ಭೇಟಿ ನೀಡಿದರು.
ನಾರಾಯಣ ಹೃದಯಾಲಯ
ಬೆಂಗಳೂರು-ಹೊಸೂರು ಹೆದ್ದಾರಿಯ ನಾರಾಯಣ ಹೃದಯಾಲಯದಲ್ಲಿ ಸಂಬಂಧಿಕರು ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಯಗಳ ಒತ್ತಡದಿಂದ ನಿನ್ನೆ ರಾತ್ರಿ ಖಾಸಗಿಯಾಗಿಯೇ ಭೇಟಿ ನೀಡಿ ಉಭಯ ಕುಶಲೋಪರಿಯನ್ನು ವಿಚಾರಿಸಿದರು.
ಮೂವತ್ತು ನಿಮಿಷಕ್ಕೂ ಹೆಚ್ಚು ಕಾಲ ಆಸ್ಪತ್ರೆಯೊಳಗಿದ್ದ ಅವರು, ತದನಂತರ ಯಾವುದೇ ಹೇಳಿಕೆ ನೀಡದೆ ಇದೊಂದು ಖಾಸಗಿ ಭೇಟಿ ಎಂದು ತಿಳಿಸಿ ಹೊರಟರು.