ಬೆಂಗಳೂರು: ಸಿಡಿ ಪ್ರಕರಣದ ವಿದ್ಯಮಾನಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಗೃಹ ಸಚಿವರು, ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆವರೆಗೆ ಸಿಡಿ ಘಟನೆ ಸಂಬಂಧ ನಡೆದ ಎಲ್ಲ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದರು. ಯುವತಿ ಪೋಷಕರು ಪೊಲೀಸ್ ಹೇಳಿಕೆ ದಾಖಲಿಸಿದ ನಂತರದ ಬೆಳವಣಿಗೆಗಳು, ಪ್ರತಿಭಟನೆಗಳು ಸೇರಿದಂತೆ ರಾಜಕೀಯ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.