ಬೆಂಗಳೂರು: ಬೇರೆ ರಾಜ್ಯಗಳಿಂದ ನಮ್ಮ ರಾಜ್ಯದ ಗಡಿ ಪ್ರವೇಶಿಸುವವರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದು ಕೆಲವೊಂದು ನಿರ್ಣಯ ಕೈಗೊಂಡರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು.
ಗೃಹ ಸಚಿವರ ಸೂಚನೆಗಳು:
- ಚೆಕ್ ಫೋಸ್ಟ್ಗಳಲ್ಲಿರುವ ಸಿಬ್ಬಂದಿಗೆ ಆರು ಮೊಬೈಲ್ ವಿಶ್ರಾಂತಿ ಕೊಠಡಿ ವ್ಯವಸ್ಥೆ
- ನಿಪ್ಪಾಣಿ, ಧೂಳ್ ಖೇಡ್, ಕಲಬುರಗಿ, ರಾಯಚೂರು, ವಿಜಯಪುರ, ಅತ್ತಿಬೆಲೆ ಚೆಕ್ ಪೋಸ್ಟ್
- ಚೆಕ್ ಪೋಸ್ಟ್ ಮತ್ತೆ ಕಂಟೇನ್ಮೆಂಟ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕುಟುಂಬಕ್ಕೆ ಪರೀಕ್ಷೆ ಕಡ್ಡಾಯ
- ಪೊಲೀಸ್ ಸಿಬ್ಬಂದಿಗೆ ಗ್ಲೌಸ್, ಮಾಸ್ಕ್ , ಸೀಲ್ಡ್ ಮತ್ತೆ ಪಿಪಿಇ ಕಿಟ್ ವಿತರಣೆ
- ಚೆಕ್ ಪೋಸ್ಟ್ಗಳಲ್ಲಿ ಸಿಬ್ಬಂದಿ ಶಿಫ್ಟ್ಗಳಲ್ಲಿ ಕೆಲಸ ನಿರ್ವಹಣೆಗೆ ತೀರ್ಮಾನ
- ಟ್ರಾಫಿಕ್ ಪೊಲೀಸರಿಗೂ ಅಗತ್ಯ ಜಾಕೆಟ್, ಮಾಸ್ಕ್, ಸ್ಯಾನಿಟೈಸರ್, ಹೆಡ್ವೈಪರ್ ವಿತರಣೆಗೆ ತೀರ್ಮಾನ
- ಪೊಲೀಸ್ ವಸತಿ ನಿಲಯಗಳಲ್ಲಿ ಫುಮಿಗೇಷನ್ ಮಾಡಲು ತೀರ್ಮಾನ
- ಸಿಬ್ಬಂದಿ ಜೊತೆ ಹಿರಿಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರುವಂತೆ ಸೂಚನೆ
ಮೊಬೈಲ್ ವಿಶ್ರಾಂತಿ ಕೊಠಡಿ ಪರಿಶೀಲಿಸಿದ ಸಚಿವರು
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಚಿವರು, ಮೊಬೈಲ್ ವಿಶ್ರಾಂತಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು. ವಿಶ್ರಾಂತಿ ಗೃಹಗಳ ಗುಣಮಟ್ಟ ಹಾಗೂ ಸೌಲಭ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.