ಕರ್ನಾಟಕ

karnataka

ETV Bharat / state

ಪರಪ್ಪನ ಅಗ್ರಹಾರಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ..

ಅಗತ್ಯಕ್ಕಿಂತ ಹೆಚ್ಚಿರುವ ಬಂಧಿಗಳ ಸಂಖ್ಯೆ, ಕಾರಾಗೃಹದ ಒಳಗೆ ನಡೆಯುತ್ತಿವೆ ಎನ್ನಲಾದ ಕುಕೃತ್ಯಗಳ ಬಗ್ಗೆ ನಿಗಾ ವಹಿಸುವಂತೆ ಆದೇಶಿಸುವ ಪರಿಪಾಠಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಮುಂದಾಗಿದ್ದಾರೆ.

Home Minister Araga Jnanendra
ಗೃಹಸಚಿವ ಆರಗ ಜ್ಞಾನೇಂದ್ರ

By

Published : Aug 26, 2021, 4:51 PM IST

ಬೆಂಗಳೂರು: ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಗರದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿದರು. ಗೃಹ ಸಚಿವರ ಆಗಮನದ ಹಿನ್ನೆಲೆ ಜೈಲಿನ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜೈಲಿನ ಬಳಿಯ ಸುತ್ತಮುತ್ತ ಪೊಲೀಸ್ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಗೃಹಸಚಿವರ ಆಗಮನಕ್ಕೆ ಹಸಿರು ನಿಶಾನೆ ನೀಡಿದ್ದರು.

ಪರಪ್ಪನ ಅಗ್ರಹಾರಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ

ಸಚಿವ ಸ್ಥಾನ ಅಲಂಕರಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದರು. ನಂತರ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಹಿಂದೆ ಇದ್ದ ಸ್ಥಿತಿ ಹಾಗೂ ಮುಂದೆ ಆಗಬೇಕಾದ ಕೆಲಸಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಕೋವಿಡ್ ಪರಿಸ್ಥಿತಿಯಲ್ಲಿ ನಿರ್ವಹಿಸಿದ ನಿಯಮಗಳು ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ.

ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿರುವ ಬಂಧಿಗಳ ಸಂಖ್ಯೆ, ಕಾರಾಗೃಹದ ಒಳಗೆ ನಡೆಯುತ್ತಿವೆ ಎನ್ನಲಾದ ಕುಕೃತ್ಯಗಳ ಬಗ್ಗೆ ನಿಗಾ ವಹಿಸುವಂತೆ ಆದೇಶಿಸುವ ಪರಿಪಾಠಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಮುಂದಾಗಿದ್ದಾರೆ ಎನ್ನಲಾಗಿದೆ.

ಓದಿ:ಕಬ್ಬು ಬೆಳೆಗಾರಿಗೆ ಸಿಹಿಸುದ್ದಿ: ಪ್ರತಿ ಕ್ವಿಂಟಾಲ್​​ಗೆ​ ಎಫ್​ಆರ್​ಪಿ 290 ರೂಗೆ ಹೆಚ್ಚಳ

ABOUT THE AUTHOR

...view details