ಕರ್ನಾಟಕ

karnataka

By

Published : Jan 12, 2022, 4:14 PM IST

ETV Bharat / state

ಹೈಕೋರ್ಟ್ ಆದೇಶದ ಬಗ್ಗೆ ಚರ್ಚಿಸಿ, ಅದರಂತೆ ಕ್ರಮ ಕೈಗೊಳ್ಳುತ್ತೇವೆ: ಗೃಹ ಸಚಿವ ಆರಗ

ಹೈಕೋರ್ಟ್ ಒಂದು ದಿನ ಅವಕಾಶ ಕೊಟ್ಟಿದೆ, ಈ ಬಗ್ಗೆ ಕೋರ್ಟ್‌ಗೆ ತಿಳಿಸುತ್ತೇವೆ. ಮುಂದಿನ ನಿರ್ಣಯದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಜವಾಬ್ದಾರಿಯುತವಾದ ಪ್ರತಿಪಕ್ಷಕ್ಕೂ ಪ್ರಶ್ನೆ ಮಾಡಿದೆ. ಅವರಾಗಿಯೇ ಪಾದಯಾತ್ರೆ ನಿಲ್ಲಿಸುತ್ತಾರೆ ಅಂತ ಅನ್ನಿಸುತ್ತದೆ‌ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಬೆಂಗಳೂರು: ನಾವು ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತೇವೆ. ಕೋರ್ಟ್ ಆದೇಶವನ್ನು ಪಾಲಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಸೂಚನೆ ಹಿನ್ನೆಲೆ ಎಜಿಯವರಿಂದ ವರದಿ ಬಂದ ನಂತರ ಮುಖ್ಯಮಂತ್ರಿಗಳು ಪರಿಶೀಲನೆ ಮಾಡುತ್ತಾರೆ. ನಾನು ಆ ಬಗ್ಗೆ ನೋಡುತ್ತೇನೆ. ಜವಾಬ್ದಾರಿಯುತವಾದ ವಿಪಕ್ಷಕ್ಕೂ ನೋಟಿಸ್ ಕೊಟ್ಟಿದೆ. ವರದಿ ಕೇಳಿದೆ, ಯಾರ ಅನುಮತಿ ತೆಗೆದುಕೊಂಡಿದ್ದಿರಾ ಎಂದು ಪ್ರಶ್ನಿಸಿದೆ ಎಂದು ತಿಳಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಕೋರ್ಟ್ ಒಂದು ದಿನ ಅವಕಾಶ ಕೊಟ್ಟಿದೆ, ಈ ಬಗ್ಗೆ ಕೋರ್ಟ್‌ಗೆ ತಿಳಿಸುತ್ತೇವೆ. ಮುಂದಿನ ನಿರ್ಣಯದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಜವಾಬ್ದಾರಿಯುತವಾದ ಪ್ರತಿಪಕ್ಷಕ್ಕೂ ಪ್ರಶ್ನೆ ಮಾಡಿದೆ. ಅವರಾಗಿಯೇ ಪಾದಯಾತ್ರೆ ನಿಲ್ಲಿಸುತ್ತಾರೆ ಅಂತ ಅನ್ನಿಸುತ್ತದೆ‌ ಎಂದರು.

ಲಾಕ್ ಡೌನ್ ಅಂತ್ಯಕ್ಕೆ ಬರ್ತಾ ಇದ್ದೀವಿ ಅಂತ ನಾನು ಹೇಳಿಲ್ಲ. ಆದರೆ ಲಾಕ್‌ಡೌನ್ ಕೊನೆ ಅಸ್ತ್ರ ಎಂದು ಹೇಳಿದ್ದೇನೆ. ಲಾಕ್‌ಡೌನ್ ನಿಂದ ಜನಸಾಮಾನ್ಯರಿಗೆ ಸಮಸ್ಯೆ ಆಗುತ್ತದೆ. ಸದ್ಯ ಮರಣದ ಪ್ರಮಾಣ ಕಡಿಮೆ ಇದೆ. ಹಾಗಾಗಿ ಈಗ ಲಾಕ್‌ಡೌನ್ ಪರಿಸ್ಥಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details