ಕರ್ನಾಟಕ

karnataka

ETV Bharat / state

'ಅನಧಿಕೃತವಾಗಿ ವಶಪಡಿಸಿಕೊಂಡಿರುವ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ'

ರಾಜ್ಯ ಅರಣ್ಯ ಇಲಾಖೆ ಅನಧಿಕೃತವಾಗಿ ವಶಪಡಿಸಿಕೊಂಡಿರುವ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲು ಗೃಹ ಸಚಿವ ಆರಗ ಜ್ಞಾನೇಂದ್ರ (Home minister Araga Jnanendra) ಮನವಿ ಮಾಡಿದ್ದಾರೆ.

meeting
ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

By

Published : Nov 16, 2021, 10:34 PM IST

ಬೆಂಗಳೂರು:ಚಕ್ರಾ, ಸಾವೇಹಕ್ಲು ಹಾಗೂ ಮಾಣೆ ಯೋಜನೆಗಳ ಸಂಬಂಧ ರಾಜ್ಯ ಅರಣ್ಯ ಇಲಾಖೆ, ಅನಧಿಕೃತವಾಗಿ ನೋಟಿಫಿಕೇಶನ್ ಮಾಡಿಕೊಂಡಿರುವ ಭೂ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸು ಹಸ್ತಾಂತರ ಮಾಡಿ ಕೊಡುವ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು (Araga Jnanendra), ಇಂದು ಅರಣ್ಯ ಸಚಿವ ಉಮೇಶ್ ಕತ್ತಿ(Umesh katti) ಹಾಗೂ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ, ಪ್ರಸ್ತಾಪ ಮಾಡಿದ ಸಚಿವ ಅರಗ ಜ್ಞಾನೇಂದ್ರ, ಕಳೆದ ಮೂರು ದಶಕಗಳಿಗೂ ಹೆಚ್ಚಿನ ಸಮಯದಿಂದ ನೆನೆಗುದಿಗೆ ಬಿದ್ದಿರುವ ಜ್ವಲಂತ ಸಮಸ್ಯೆಗೆ ಪರಿಹಾರ ದೊರಕಿಸುವಂತೆ, ಸಚಿವ ಉಮೇಶ್ ಕತ್ತಿ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಇಲಾಖೆಯ ವಶದಲ್ಲಿ ಅನಧಿಕೃತವಾಗಿ ಇರುವ ಭೂಮಿಯಲ್ಲಿ, ಈಗಾಗಲೇ, ಜನವಸತಿಯ ಪ್ರದೇಶವಾಗಿದ್ದು, ಶಾಲೆ, ಆಸ್ಪತ್ರೆ ಹಾಗೂ ಇನ್ನಿತರ ಸರಕಾರಿ ಸಾರ್ವಜನಿಕ ಸೇವೆಗಳನ್ನು ನೀಡಲಾಗುತ್ತಿದೆ. ಹತ್ತು ಹಲವು ವರ್ಷಗಳಿಂದ, ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಸಾವಿರಾರು ಜನರ ಅನಿಶ್ಚತತೆಗೆ ಕೊನೆ ಹೇಳಬೇಕೆಂದು ಸಚಿವರು ತಿಳಿಸಿದರು.

ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದ ಅರಣ್ಯ ಸಚಿವ ಉಮೇಶ್ ಕತ್ತಿ ಅವರು, ಈ ಸಂಬಂಧ ಅಗತ್ಯ ಬಿದ್ದರೆ ಸಂಪುಟ ಸಭಯಲ್ಲಿಯೂ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂಜಯ್ ಬಿಜ್ಜೂರ್, ಸಂಜಯ್ ಮೋಹನ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details