ಕರ್ನಾಟಕ

karnataka

ETV Bharat / state

ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ: ಆರಗ ಜ್ಞಾನೇಂದ್ರ

ಉಪಚುನಾವಣೆಯಲ್ಲಿ ಬಿಜೆಪಿ ಒಂದು ಕ್ಷೇತ್ರ ಗೆದ್ದರೆ, ಮತ್ತೊಂದನ್ನು ಕಳೆದುಕೊಂಡಿದೆ. ಈ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದರು.

home-minister-aaraga-jnanendra
ಆರಗ ಜ್ಞಾನೇಂದ್ರ

By

Published : Nov 2, 2021, 4:36 PM IST

ಬೆಂಗಳೂರು: ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶ ಬಂದಿದೆ. ಒಂದರಲ್ಲಿ ಗೆದ್ದಿದ್ದೇವೆ. ಒಂದು ಕಳೆದುಕೊಂಡಿದ್ದೇವೆ. 30 ಸಾವಿರ ಮತಗಳ ಅಂತರದಲ್ಲಿ ಸಿಂದಗಿಯಲ್ಲಿ ಗೆದ್ದಿದ್ದೇವೆ ಎಂದರು.


ಪುನೀತ್ ರಾಜ್​ಕುಮಾರ್ ಅವರ ನಿಧನದ ವೇಳೆ ಪೊಲೀಸರು ಎರಡು ರಾತ್ರಿ, ಹಗಲು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಶಾಂತಿ, ಸುವ್ಯವಸ್ಥೆ ಕಾಪಾಡಿದ್ದಾರೆ. ಡಿಜಿ ಆಫೀಸ್​ನಲ್ಲಿ ಎಲ್ಲರನ್ನೂ ಕರೆದು ಅಭಿನಂದನೆ ತಿಳಿಸಿದ್ದೇನೆ. ಹೊರಗಿನಿಂದ ಬಂದು ಇಲ್ಲಿ ಕೆಲಸ ಮಾಡಿರುವ ಕಾನ್ಸ್​ಸ್ಟೇಬಲ್‌ಗಳೂ ಸೇರಿ ಎಲ್ಲರಿಗೂ ಭತ್ಯೆ ಕೊಡ್ತೇವೆ ಎಂದು ಹೇಳಿದರು.

ಈ ಭತ್ಯೆ ಹತ್ತು ದಿನಗಳೊಳಗಾಗಿ ಅವರಿಗೆ ಸಿಗುವ ಹಾಗೆ ಮಾಡ್ತೀನಿ. ಕಾನ್ಸ್​ಸ್ಟೇಬಲ್ ಒಬ್ಬರಿಗೆ ಕಾಲು ಮುರಿದಿತ್ತು. ಅವರ ಜೊತೆ ನಾನೇ ಮಾತನಾಡಿದ್ದೇನೆ. ಉತ್ತಮ ಚಿಕಿತ್ಸೆ ನೀಡುವಂತೆಯೂ ಸೂಚಿಸಿದ್ದೇನೆ. ಪೊಲೀಸರ ಶ್ರಮ ಬಹಳ ದೊಡ್ಡದಿದೆ. ಸಿಎಂ ನೇತೃತ್ವದಲ್ಲಿ ನಾವು ಎಲ್ಲರೂ ಸೇರಿ ಕೆಲಸ ಮಾಡಿದ್ದೇವೆ ಎಂದರು.

'ಹಾನಗಲ್​ನಲ್ಲಿ ಮತದಾರ ಕೊಟ್ಟಿರುವ ‌ತೀರ್ಪಿಗೆ ತಲೆಬಾಗುತ್ತೇವೆ'

ಹಾನಗಲ್​ನಲ್ಲಿ ಸಣ್ಣ ಮಟ್ಟಿನ ಸೋಲಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಚುನಾವಣೆಯಲ್ಲಿ ಇನ್ನಷ್ಟು ಹೋರಾಟ ಮಾಡಿ ಗೆಲ್ಲಬೇಕಾದ ಅನಿವಾರ್ಯತೆಗಳಿವೆ. ಆದ್ದರಿಂದ, ಮತದಾರ ಕೊಟ್ಟಿರುವ ‌ತೀರ್ಪಿಗೆ ತಲೆಬಾಗುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ.

ಸಿಂದಗಿಯಲ್ಲಿ ನಡೆದ ಉಪಚುನಾವಣೆಯಲ್ಲಿ‌ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಎಲ್ಲಾ ಮತದಾರರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಗೆದ್ದ ಅಭ್ಯರ್ಥಿ ಭೂಸನೂರು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಿಎಂ ತವರು ಕ್ಷೇತ್ರದಲ್ಲಿಯೇ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್, ಇದು ಯಾರ ತವರು ಕ್ಷೇತ್ರ, ಯಾರ ಕಾರ್ಯ ಎಂಬಂತಹ ಪ್ರಶ್ನೆಯಲ್ಲ. ಅಲ್ಲಿರುವ ಮತದಾರ ಯಾವುದೇ ಆಮಿಷಗಳಿಗೆ ಬಲಿಯಾಗಿರಬಹುದು. ಅಥವಾ ನಮಗೆ ಹಿನ್ನಡೆ ಆಗಿರಬಹುದು. ಇದನ್ನೆಲ್ಲಾ ಕುಳಿತು ನಾವು ಚರ್ಚೆ ಮಾಡಿ ಮುಂದಿನ‌ ಚುನಾವಣೆಯಲ್ಲಿ ಗೆಲ್ಲುವ ತಂತ್ರವನ್ನು ಮಾಡಲಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಗೆಲುವಿನ ರೀತಿ ಸೋಲನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ : ಸಿಎಂ ಬೊಮ್ಮಾಯಿ

ABOUT THE AUTHOR

...view details