ಕರ್ನಾಟಕ

karnataka

ETV Bharat / state

ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ವಿಶೇಷ ವಿಡಿಯೋ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಹೊಂಬಾಳೆ ಫಿಲಂಸ್​ - ಪುನೀತ್​ ರಾಜ್​ ಕುಮಾರ್​ ಸುದ್ದಿ,

ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ವಿಶೇಷ ವಿಡಿಯೋ ಮೂಲಕ ಹೊಂಬಾಳೆ ಫಿಲಂಸ್​ ಶ್ರದ್ಧಾಂಜಲಿ ಅರ್ಪಿಸಿದೆ. ​

Hombale films tribute, Hombale films tribute death of Puneeth Rajkumar, Puneeth Rajkumar, Puneeth Rajkumar news, Puneeth Rajkumar death news, ಹೊಂಬಾಳೆ ಫಿಲಂಸ್​ ಶ್ರದ್ಧಾಂಜಲಿ, ಪುನೀತ್​ ರಾಜ್​ ಕುಮಾರ್​ ನಿಧನಕ್ಕೆ ಹೊಂಬಾಳೆ ಫಿಲಂಸ್​ ಶ್ರದ್ಧಾಂಜಲಿ, ಪುನೀತ್​ ರಾಜ್​ ಕುಮಾರ್​ ಸುದ್ದಿ, ಪುನೀತ್​ ರಾಜ್​ ಕುಮಾರ್​ ನಿಧನ ಸುದ್ದಿ,
ಪುನೀತ್​ ರಾಜ್​ಕುಮಾರ್​ ನಿಧನಕ್ಕೆ ವಿಶೇಷ ವಿಡಿಯೋ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಹೊಂಬಾಳೆ ಫಿಲಂಸ್​

By

Published : Oct 30, 2021, 12:11 PM IST

ಬೆಂಗಳೂರು: ನಟ ಸಾರ್ವಭೌಮ, ಪವರ್ ಸ್ಟಾರ್​​ ಪುನೀತ್ ರಾಜ್​ಕುಮಾರ್​ ಅಗಲಿಕೆಯಿಂದ ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿದೆ. ಕಂಠೀರವ ಸ್ಟೇಡಿಯಂನಲ್ಲಿ ಪುನೀತ್​ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಗಣ್ಯಾತಿಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳ ಮಹಾಪೂರವೇ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಕಡೆ ಹರಿದು ಬರುತ್ತಿದೆ. ಅಪ್ಪು ನಿಧನಕ್ಕೆ ಸ್ವಾಮೀಜಿಗಳು, ರಾಜಕಾರಣಿಗಳು ಸೇರಿದಂತೆ ಹಿರಿಯ ಗಣ್ಯರು, ಸಿನಿ ರಂಗವೇ ಕಂಬನಿ ಮಿಡಿದಿದೆ.

ಹೊಂಬಾಳೆ ಫಿಲಂಸ್​ ಅಪ್ಪು ಅವರ ವಿಶೇಷ ವಿಡಿಯೋವೊಂದನ್ನು ಮಾಡಿ ಅವರಿಗೆ ಗೌರವ ಸಲ್ಲಿಸಿದ್ದಾರೆ. ಅಪ್ಪು ಚಿಕ್ಕವಯಸ್ಸಿನಿಂದ ಹಿಡಿದು ಅವರ ಕೊನೆಯ ಚಿತ್ರದವರೆಗಿನ ವಿಡಿಯೋಗಳನ್ನು ನಾವು ಇದರಲ್ಲಿ ಕಾಣಬಹುದಾಗಿದೆ. ಈ ಒಂದು ವಿಶೇಷ ವಿಡಿಯೋ ಮೂಲಕ ಹೊಂಬಾಳೆ ಫಿಲಂಸ್​ ಸಂತಾಪ ಸೂಚಿಸಿದೆ.

ABOUT THE AUTHOR

...view details