ಬೆಂಗಳೂರು: ಮನೆಮನ, ಶಹರದ ತುಂಬೆಲ್ಲಾ ಉತ್ಸಾಹ, ಸಂಭ್ರಮ ಕಳೆಗಟ್ಟಿತ್ತು... ಇನ್ನು ಸದಾ ಒತ್ತಡದಲ್ಲೇ ಕಾಲ ಕಳೆಯುವ ಪೊಲೀಸರು ಸಹ ಮಕ್ಕಳೊಂದಿಗೆ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಮಕ್ಕಳೊಂದಿಗೆ ಬಗೆ ಬಗೆಯ ಬಣ್ಣದಲ್ಲಿ ಮಿಂದೆದ್ದ ಪೊಲೀಸರು - ಲೋಕಸಭಾ ಚುನಾವಣೆ
ನಗರದಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು. ಹಬ್ಬದ ಹುಮ್ಮಸ್ಸಿನಲ್ಲಿ ಮಕ್ಕಳು, ಯುವಕರು, ಹಿರಿಯರಾದಿಯಾಗಿ ಬಗೆ ಬಗೆಯ ಬಣ್ಣದಲ್ಲಿ ಮಿಂದೆದ್ದರು.
ಹೋಳಿ ಆಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿ
ಲೋಕಸಭಾ ಚುನಾವಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ಗುರುವಾರ ನಗರದ ಕೆಲವೆಡೆ ಪಥಸಂಚಲನ ನಡೆಸಿದರು. ಈ ವೇಳೆ ಕೆಲ ಹುಡುಗರು ಬಗೆ ಬಗೆಯ ಬಣ್ಣ ಹಿಡಿದುಕೊಂಡು ಬಂದು ಪೊಲೀಸರಿಗೆ ಹಾಕುವ ಮೂಲಕ ಹಬ್ಬದ ಶುಭಾಷಯ ತಿಳಿಸಿದರು. ಮಕ್ಕಳ ಪ್ರೀತಿಗೆ ಒಲಿದ ಪೊಲೀಸ್ ಅಧಿಕಾರಿಗಳು ಅವರೊಂದಿಗೆ ಬಣ್ಣದೋಕುಳಿ ಆಡಿ ಸಂಭ್ರಮಕ್ಕೆ ಸಾಕ್ಷಿಯಾದರು.