ಬೆಂಗಳೂರು : ಮತದಾನ ಮಾಡೋದು ಎಲ್ಲರ ಹಕ್ಕು ಎಲ್ಲರೂ ಮತದಾನ ಮಾಡಿ ಎಂದು ಮಾಜಿ ಸಚಿವ ಹೆಚ್.ಎಂ .ರೇವಣ್ಣ ಮನವಿ ಮಾಡಿದರು.
ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋದರು : ಹೆಚ್ ಎಂ ರೇವಣ್ಣ - ಹೆಚ್ ಎಂ ರೇವಣ್ಣ ಲೆಟೆಸ್ಟ್ ನ್ಯೂಸ್
ಇಂದು 13 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಮಾಜಿ ಸಚಿವ ಹೆಚ್.ಎಂ .ರೇವಣ್ಣ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.
ಇಂದು ಉಪಚುನಾವಣೆಯ ಮತದಾನ ನಡೆಸುತ್ತಿದ್ದು, ತಮ್ಮ ಪತ್ನಿಯೊಂದಿಗೆ ಆಗಮಿಸಿದ ರೇವಣ್ಣ, ಮತದಾನ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐದು ವರ್ಷಕ್ಕೆ ಒಂದು ಸಾರಿ ಚುನಾವಣೆ ಆಗಬೇಕಿತ್ತು. ಈ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋದರು. ಅನರ್ಹರು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಅನರ್ಹರು ಅಂದ್ರೆ ನಾಲಾಯಕ್, ಅವರು ಮಾಡಿದ್ದು ತಪ್ಪು ಎಂಬ ತೀರ್ಪನ್ನು ಸುಪ್ರೀಂ ನೀಡಿದೆ. ಅಲ್ಲದೇ ಈ ಚುನಾವಣೆಯಿಂದ ಸಾರ್ವಜನಿಕರ ಹಣ ಪೋಲಾಗಿದ್ದು, ಇದಕ್ಕೆ ಜನರು ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.
ಅನರ್ಹರು ಅಭಿವೃದ್ಧಿ ಕಾರ್ಯವಾಗಿಲ್ಲ ಎಂದು ಹೊರ ಬಂದರು. ಆದರೆ ಈಗಲೂ ಎಂಎಲ್ಎ ಆಗಬೇಕು ಎಂತಾಲೆ ಅವರು ಬಿಜೆಪಿಗೆ ಬಂದಿದ್ದಾರೆ. ಕರ್ನಾಟಕದ ಜನರು ಪ್ರಜ್ಞಾವಂತರು, ಸರಿಯಾಗಿ ಬುದ್ಧಿ ಕಲಿಸುತ್ತಾರೆ ಎಂದೇಳಿದರು.