ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ನೀಡಿದ ವಿಚಾರವಾಗಿ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು, ಸಿಎಂ ಕುಮಾರಸ್ವಾಮಿ ಅವರಿಗೆ ಎರಡನೇ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಂದಾಲ್ಗೆ ಭೂಮಿ ನೀಡಿಕೆ ವಿವಾದ: ಸಿಎಂಗೆ ಮತ್ತೊಂದು ಪತ್ರ ಬರೆದ ಹೆಚ್.ಕೆ ಪಾಟೀಲ್ - ಹೆಚ್ ಕೆ ಪಾಟೀಲ್
ಜಿಂದಾಲ್ಗೆ ಭೂಮಿ ನೀಡುವ ಕ್ಯಾಬಿನೆಟ್ ನಿರ್ಣಯ ವಾಪಸ್ ಪಡೆಯುವಂತೆ ಸಿಎಂ ಅವರನ್ನು ಹೆಚ್.ಕೆ ಪಾಟೀಲ್ ಆಗ್ರಹಿಸಿದ್ದಾರೆ.
ಹೆಚ್ ಕೆ ಪಾಟೀಲ್ ಬರೆದ ಪತ್ರ
ಕ್ಯಾಬಿನೆಟ್ ನಿರ್ಧಾರ ರದ್ದು ಮಾಡುವಂತೆ ಮತ್ತೊಂದು ಪತ್ರ ಬರೆದಿರುವ ಪಾಟೀಲರು, ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ಕ್ರಯ ವಿಚಾರ ಪ್ರಸ್ತಾಪಿಸಿದ್ದಾರೆ. ಪತ್ರದಲ್ಲಿ ಅವರು, ಸರ್ಕಾರದ ನಿರ್ಣಯ ಕರಾಳವಾಗಿದೆ. ಇಲಾಖೆ ಜಿಂದಾಲ್ಗೆ ಭೂಮಿ ನೀಡಲು ಸಾಧ್ಯವಿಲ್ಲ ಎಂದಿದೆ.
ಲೋಕಾಯುಕ್ತದಲ್ಲೂ ಜಿಂದಾಲ್ ಅಪರಾಧಿ ಸ್ಥಾನದಲ್ಲಿದೆ. ಹೀಗಾಗಿ ಜಿಂದಾಲ್ಗೆ ಭೂಮಿ ಕ್ರಯ ನೀಡುವ ಕ್ಯಾಬಿನೆಟ್ ನಿರ್ಣಯ ವಾಪಸ್ ಪಡೆಯುವಂತೆ ಹೆಚ್. ಕೆ ಪಾಟೀಲ್ ಆಗ್ರಹ ಮಾಡಿದ್ದಾರೆ.