ಬೆಂಗಳೂರು: ಉಪಸಮರದಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಪಕ್ಷಾಂತರ ವಿಷಯ ಮೂಲ ವಸ್ತುವಾಗಿತ್ತು. ಜನ ವಿಶೇಷ ತೀರ್ಪು ಕೊಡ್ತಾರೆ ಎಂಬ ನಿರೀಕ್ಷೆ ಇತ್ತು. ನಿರೀಕ್ಷೆ ಹುಸಿಯಾಗಿದೆ, ಜನರ ಮನಸ್ಸು ವಿಚಿತ್ರವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಜನರ ಮನಸ್ಸು ಘಾಸಿಗೊಳಿಸುವ ವಾಮಮಾರ್ಗ ನಡೆಯಿತು. ಚುನಾವಣಾ ಆಯೋಗ ಮೂಕ ಪ್ರೇಕ್ಷಕವಾಯ್ತು. ಒಟ್ಟು ವ್ಯವಸ್ಥೆ ಬಗ್ಗೆ ನಿರಾಸೆಯ ವಾತಾವರಣ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಈ ರೀತಿ ರಾಜೀನಾಮೆ ನೀಡಿದ್ದು ಸ್ವಾಭಾವಿಕ. ಮುಂದೆ ಹೈಕಮಾಂಡ್ ಏನು ಮಾಡುತ್ತೋ ನೋಡೋಣ. ಸಿದ್ದರಾಮಯ್ಯ ಅವರನ್ನು ಭೇಟಿಯಾದಾಗ ಏನು ಹೇಳಬೇಕೋ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.