ಕರ್ನಾಟಕ

karnataka

ETV Bharat / state

ಆನೇಕಲ್​ನಲ್ಲಿ ಹಿಟ್ ಆ್ಯಂಡ್ ರನ್.. ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವು - ETV Bharath Kannada

ಬೆಂಗಳೂರಿನ ಹೊರ ವಲಯದಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ​ನಡೆದಿದ್ದು, ನಡೆದುಕೊಂಡು ಹೋಗುತ್ತಿದ್ದ ಮೂವರು ಕಾರ್ಮಿಕರಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Etv Bharat
ಹಿಟ್ ಆ್ಯಂಡ್ ರನ್

By

Published : Dec 13, 2022, 7:51 AM IST

Updated : Dec 13, 2022, 7:58 AM IST

ಆನೇಕಲ್(ಬೆಂಗಳೂರು): ಕೆಲಸ ಮುಗಿಸಿಕೊಂಡು ಮನೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರ ಮೇಲೆ ಈಚರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಅಸ್ಸೋಂ ಮೂಲದ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಮುಖ್ಯರಸ್ತೆಯ ಮಾಯಸಂದ್ರದ ಬಳಿ ಸೋಮವಾರ ತಡರಾತ್ರಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ವಾಹನದ ಮುಂಭಾಗದ ಬಿಡಿ ಭಾಗಗಳು ಬಿದ್ದಿರುವುದನ್ನು ನೋಡಿ ಸ್ಥಳೀಯರು ಕೂಡಲೇ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ದೇಹಗಳನ್ನು ಅತ್ತಿಬೆಲೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಾಹನದ ಸಮೇತ ಪರಾರಿಯಾಗಿರುವ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ‌.

ಅಸ್ಸೋಂ ಮೂಲದ ಕಾರ್ಮಿಕರ ಸಂಬಂಧಿಕರು ಸಿಕ್ಕಬಳಿಕ ಅವರ ಹೆಸರು ಹಾಗೂ ಎಲ್ಲಿ ವಾಸ ಇದ್ದರೂ ಎನ್ನುವ ಬಗ್ಗ ಮಾಹಿತಿ ಸಿಗಲಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯ ಬದಿಗಳಲ್ಲಿ ಮೂವರ ದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಇದನ್ನೂ ಓದಿ:ಸುಳ್ಯ ಬಳಿ ಮದುವೆಗೆ ಹೊರಟ ಕಾರು ಅಪಘಾತ: ತಾಯಿ-ಮಗು ದುರ್ಮರಣ

Last Updated : Dec 13, 2022, 7:58 AM IST

ABOUT THE AUTHOR

...view details