ಬೆಂಗಳೂರು:ಹಿಟ್ ಆ್ಯಂಡ್ ರನ್ ಕೇಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ಅಪರಾಧಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ರಘುನಾಥ್ ಪಾಸ್ವಾನ್ ತಲೆಮರೆಸಿಕೊಂಡಿದ್ದ ಅಪರಾಧಿ.
ಕ್ಯಾಬ್ ಚಾಲಕನಾಗಿದ್ದ ಈತ 2009 ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ಐಆರ್ ಲೇಔಟ್ ಬಳಿ ಪಾದಚಾರಿಯೋರ್ವರಿಗೆ ಗುದ್ದಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಕೂಡ ಸಲ್ಲಿಸಿಯಾಗಿತ್ತು. ಆರೋಪ ಸಾಬೀತು ಹಿನ್ನೆಲೆ ಆರು ತಿಂಗಳ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿತ್ತು.