ಕರ್ನಾಟಕ

karnataka

ETV Bharat / state

ಬೆಂಗಳೂರಿನ ಐತಿಹಾಸಿಕ ದೊಡ್ಡ ಆಲದಮರದ ಬೃಹತ್​ ಭಾಗ ಧರಾಶಾಹಿ

400 ವರ್ಷದ ಇತಿಹಾಸ ಹೊಂದಿರುವ ಪಾರಂಪರಿಕ ವೃಕ್ಷ ಅಂತ ಕರೆಸಿಕೊಂಡಿರುವ ಬೆಂಗಳೂರಿನ ದೊಡ್ಡ ಆಲದಮರದ ಬೃಹತ್​ ಭಾಗವೊಂದು ಧರೆಗುರುಳಿದೆ.

historic-bengaluru-big-banyan-tree-parts-fell-down-due-to-rain
ಆಲದಮರದ ಬೃಹತ್​ ಭಾಗ ಧರಾಶಾಹಿ

By

Published : May 11, 2022, 3:25 PM IST

Updated : May 11, 2022, 4:07 PM IST

ಬೆಂಗಳೂರು:ದೇಶದ ಗಮನ ಸೆಳೆದ ಪ್ರವಾಸಿ ತಾಣಗಳಲ್ಲಿ ಬೆಂಗಳೂರು ದೊಡ್ಡಾಲದ ಮರವೂ ಒಂದು. ಗೂಗಲ್​​ನಲ್ಲಿ ಬೆಂಗಳೂರಿನಲ್ಲಿ ನೋಡಬಹುದಾದ ಸ್ಥಳಗಳನ್ನು ಹುಡುಕಿದರೆ ಅದರಲ್ಲಿ ದೊಡ್ಡಾಲದ ಮರವು ಕಾಣಸಿಗುತ್ತದೆ‌. 400 ವರ್ಷದ ಇತಿಹಾಸ ಹೊಂದಿರುವ ಪಾರಂಪರಿಕ ವೃಕ್ಷ ಎಂದೇ ಕರೆಸಿಕೊಂಡಿರುವ ದೊಡ್ಡ ಆಲದಮರದ ಒಂದು ಬೃಹತ್​ ಭಾಗ ಇದೀಗ ಧರೆಗುರುಳಿದೆ.

ಆಲದಮರದ ಬೃಹತ್​ ಭಾಗ ಧರಾಶಾಹಿ

ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ದೊಡ್ಡಾಲದಮರದ ಭಾಗವೊಂದು ಬುಡಸಮೇತ ನೆಲಕ್ಕುರುಳಿದೆ. ಹಾಗೆಯೇ ಮರದ ಇತರ ಭಾಗಗಳೂ ಅಪಾಯದ ಅಂಚಿನಲ್ಲಿದೆ. ಕಳೆದೊಂದು ವಾರದಿಂದ ಸತತ ಸುರಿದ ಮಳೆಯಿಂದಾಗಿ ಮರದ ಭಾಗಗಳು ಧರೆಗುರುಳಿರುವ ಸಾಧ್ಯತೆಯಿದೆ ಎಂದು ತೋಟಗಾರಿಕ ಇಲಾಖೆ ಹೇಳಿದೆ.‌

ದೊಡ್ಡ ಆಲದಮರದ ಬೃಹತ್​ ಭಾಗ ಧರಾಶಾಹಿ

ಆದರೆ, ಹುಲ್ಲುಹಾಸು ಮಾಡುವ ಉದ್ದೇಶದಿಂದ ಮರಗಳ ಬುಡದಲ್ಲಿನ ಮಣ್ಣು ತೆಗೆಯಲಾಗಿದೆ. ಈಗ ಬುಡದಲ್ಲಿ ಹೆಚ್ಚಿನ ಮಣ್ಣಿಲ್ಲದೇ ಮರವು ಬೀಳುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಮರ ಬೀಳುವ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಆದರೆ ಇನ್ನಷ್ಟು ಮರಗಳು ಅಪಾಯದ ಸ್ಥಿತಿಯಲ್ಲಿರುವುದು ಆತಂಕ ಸೃಷ್ಟಿಸಿದೆ.

ಆಲದಮರದ ಬೃಹತ್​ ಭಾಗ ಧರಾಶಾಹಿ

ಸುಮಾರು ಮೂರು ಎಕರೆಯಷ್ಟು ವಿಶಾಲವಾಗಿ ದೊಡ್ಡಾಲದಮರ ಚಾಚಿಕೊಂಡಿದೆ. 400 ವರ್ಷದ ಇತಿಹಾಸ ಹೊಂದಿರುವ ಕಾರಣಕ್ಕೆ ಭಾರತದ ಅತ್ಯಂತ ನಾಲ್ಕನೇ ಪುರಾತನ ಆಲದ ಮರ ಎನ್ನುವ ಹೆಗ್ಗಳಿಕೆ ಇದರದ್ದಾಗಿದೆ. ತೋಟಗಾರಿಕ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಮರದ ದೊಡ್ಡ ಭಾಗವೊಂದು ಧರೆಗುರುಳಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಸರ್ಕಾರಕ್ಕೆ ತೋಟಗಾರಿಕ ಇಲಾಖೆ ಪತ್ರ

ಇತ್ತ ದೊಡ್ಡಾಲದ ಮರದ ಸಮೀಪ ಜನರು ಓಡಾಡುವುದರಿಂದ ಅಪಾಯ ಎದುರಾಗಬಹುದು. ಇಲ್ಲಿನ ಬಹುತೇಕ ಮರಗಳು ಬಾಗಿದ ಸ್ಥಿತಿಯಲ್ಲಿವೆ ಎಂದು ತೋಟಗಾರಿಕೆ ಸಹಾಯಕ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:ಅಸನಿ ಚಂಡಮಾರುತ: ಆಂಧ್ರದ ಸಮುದ್ರ ತೀರಕ್ಕೆ ತೇಲಿ ಬಂತು ನಿಗೂಢ ಚಿನ್ನದ ರಥ!

Last Updated : May 11, 2022, 4:07 PM IST

ABOUT THE AUTHOR

...view details