ಬೆಂಗಳೂರು: ನಗರದಲ್ಲಿ ಜಮ್ಮು ಕಾಶ್ಮೀರ ಪೊಲೀಸರಿಂದ ಬಂಧನಕ್ಕೊಳಗಾದ ಹಿಜ್ಜುಲ್ ಮುಜಾಹಿದೀನ್ ಸಂಘಟನೆಯ ಉಗ್ರ ತಾಲೀಬ್ ಹುಸೈನ್ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ತನಿಖೆ ಕೈಗೊಳ್ಳುವಂತೆ ಭಜರಂಗದಳ ಹಾಗು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಹಿಂದೂ ಸಂಘಟನೆಯ ಮುಖಂಡರಾದ ತೇಜಸ್ ಗೌಡ, ಗೋವರ್ಧನ್ ಹಾಗು ಶಿವಕುಮಾರ್ ನೇತೃತ್ವದ ತಂಡದಿಂಧ ಬಂಧಿತನಾದ ಉಗ್ರ ತಾಲೀಬ್ ಹುಸೈನ್ ಗೆ ನಗರದಲ್ಲಿ ಆಶ್ರಯ ಕೊಟ್ಟವರು, ಸಿಮ್ ಕಾರ್ಡ್ ಕೊಟ್ಟವರನ್ನೂ ಕೂಡ ವಿಚಾರಣೆಗೊಳಪಡಿಸಬೇಕು ಹಾಗೂ ಆತ ಪ್ರಾರ್ಥನೆ ಸಲ್ಲಿಸಿ ಬೋಧನೆ ಮಾಡುತ್ತಿದ್ದ ಮಸೀದಿಯನ್ನು ಮುಚ್ಚಿಸುವಂತೆ ದೂರು ನೀಡಿದ್ದಾರೆ.