ಆನೇಕಲ್ :ಬನ್ನೇರುಘಟ್ಟ ಜೈವಿಕ ಉದ್ಯಾನದ ಮೃಗಾಲಯದಲ್ಲಿ ಹಿಮಾಲಯನ್ ಕರಡಿಯೊಂದು ಸಾವನ್ನಪ್ಪಿದೆ. ಗುರುವಾರ 27 ವರ್ಷ ಪ್ರಾಯದ ‘ಮೋಹನ್’ ಎಂಬ ಕರಡಿ ಮೃತಪಟ್ಟಿದೆ. ಈ ಕರಡಿಯು ವಯೋಸಹಜವಾಗಿ ಲಿಂಪೋ ಸಾರ್ಕೋಮಾ ಎಂಬ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದೆ.
ಕರಡಿಗಳ ಆಯಸ್ಸು ಸುಮಾರು 25ರಿಂದ 30 ವರ್ಷಗಳಾಗಿದೆ. ಕರಡಿ ಮೋಹನ್ ಕಳೆದ 15 ದಿನಗಳಿಂದ ತೀವ್ರ ಅನಾರೋಗದಿಂದ ಬಳಲುತ್ತಿತ್ತು. ಚಿಕಿತ್ಸೆ ನೀಡಲಾಗುತ್ತಿತ್ತಾದರೂ ನಿನ್ನೆ ಸ್ಫಂದಿಸದೆ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.