ಬೆಂಗಳೂರು:ಸಿಲಿಕಾನ್ ಸಿಟಿಯಲ್ಲೀಗ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.ಲಾಭ ಕೊಡುವ ಹೆಸರಲ್ಲಿ ನಗರದಲ್ಲಿ ದೊಡ್ಡ ದೊಡ್ಡ ವಂಚನೆಗಳೇ ನಡೆದರೂ ಬುದ್ಧಿ ಕಲಿಯದ ಅಮಾಯಕರಿಗೆ ಮಹಿಳೆಯೊಬ್ಬಳು ಟೋಪಿ ಹಾಕಿ ನಾಪತ್ತೆಯಾಗಿದ್ದಾಳೆ.
ಹಿಮಲ್ ಅಡ್ವೈಸರಿ ಕಂಪನಿ ಹೆಸರಲ್ಲಿ ಹೂಡಿಕೆ.. ಲಕ್ಷಾಂತರ ರೂ. ದೋಖಾ ಆ್ಯಂಬಿಡೆಂಟ್,ಐಎಂಎ,ಆಲಾ, ಇಂಜಾಜ್ ಹೀಗೆ ಲಾಭಾಂಶದ ಭರವಸೆ ನೀಡಿ ಅಮಾಯಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಕಂಪನಿಗಳು ಒಂದಾ ಎರಡಾ. ಇಷ್ಟೆಲ್ಲಾ ವಂಚಕ ಕಂಪನಿಗಳಿಂದ ಸಾವಿರಾರು ಜನ ಅಮಾಯಕರು ಮೋಸ ಹೋಗಿದ್ರೂ ಮತ್ತೆ ಮತ್ತೆ ಬೆಳಕಿಗೆ ಬರ್ತಿರೋ ವಂಚನೆ ಪ್ರಕರಣಗಳು ಮಾತ್ರ ನಿಂತಿಲ್ಲ. ಇದೀಗ ನಗರದಲ್ಲಿ ಇದೇ ಮಾದರಿಯಲ್ಲೇ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ದಾಖಲಾಗಿದೆ.
ಹಿಮಲ್ ಅಡ್ವೈಸರಿ ಕಂಪನಿ ಹೆಸರಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ ಶೇ.15-20 ಬಡ್ಡಿ ಜೊತೆಗೆ ಕಾರು, ಫ್ಲ್ಯಾಟ್ ಕೊಡ್ತೀನಿ ಎಂದು ಸಂಬಂಧಿಕರು, ಪರಿಚಿತರಿಂದಲೇ ಹಣ ಹೂಡಿಕೆ ಮಾಡಿಸಿಕೊಂಡಿದ್ದ ನಾಝಿಯಾ ಖಾನ್ ಎಂಬ ಮಹಿಳೆ ಈಗ ಬಡ್ಡಿ ಇರಲಿ ಅಸಲು ಕೂಡ ನೀಡದೆ ನಾಪತ್ತೆಯಾಗಿದ್ದಾಳೆ.
ವಂಚಕಿ ನಾಝಿಯಾ ಖಾನ್ ಎಫ್ಬಿ ಪೋಸ್ಟ್ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಆರ್‌ಟಿನಗರದ ತಿಮ್ಮಯ್ಯ ಗಾರ್ಡನ್ ಬಳಿ ವಂಚಕಿ ನಾಝಿಯಾ ಖಾನ್ ಹಾಗೂ ಮೂವರು ಪಾರ್ಟ್ನರ್‌ಗಳ ಸಹಯೋಗದೊಂದಿಗೆ ತಲೆ ಎತ್ತಿದ್ದ ಹಿಮಲ್ ಅಡ್ವೈಸರಿ ಕಂಪನಿ ಮೊದಲು ಟಾರ್ಗೆಟ್ ಮಾಡಿದ್ದೆ ತಮ್ಮ ಮುಖ್ಯಸ್ಥರ ಸಂಬಂಧಿಕರು ಪರಿಚಿತರನ್ನ. ಹಣ ಹೂಡಿಕೆ ಮಾಡಿದರೆ ಅದನ್ನ ತಾವು ಗೋಲ್ಡ್ ಬ್ಯುಸಿನೆಸ್, ಟ್ರೇಡ್ ಮಾರ್ಕೆಟ್‌ನಲ್ಲಿ ತೊಡಗಿಸ್ತೀವಿ, ಅದರಿಂದ ಬರುವ ಲಾಭದಲ್ಲಿ ಪಾಲು ಕೊಡ್ತೀವಿ, ಅಲ್ಲದೆ ₹5 ಲಕ್ಷ ಹೂಡಿಕೆ ಮಾಡಿದವರಿಗೆ ಪ್ರತಿ ತಿಂಗಳು ಲಕ್ಷಕ್ಕೆ 15 ಸಾವಿರದಂತೆ ಲಾಭ ನೀಡ್ತೀವಿ, ಆಲ್ಟೋ ಕಾರ್ ನೀಡ್ತೀವಿ ಅಂತಾ ಹಣ ಸಂಗ್ರಹಿಸಲಾಗಿತ್ತಂತೆ.
ಆದರೆ, ಹಣ ಸಂಗ್ರಹಿಸಿಕೊಂಡ ಈ ನಕಲಿ ಕಂಪನಿ ಲಾಭ ಹಾಗೂ ಅಸಲು ಹಣವನ್ನೂ ನೀಡದೆ ವಂಚಿಸಿರುವುದಾಗಿ ಹಣ ಕಳೆದುಕೊಂಡವರು ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಆರ್‌ಟಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.