ಬೆಂಗಳೂರು : ಕಾಂಗ್ರೆಸ್ ಹಿಂದೆ ನಿಂತು ಪ್ರಚೋದಿಸುವ, ಅಶಾಂತಿಯನ್ನು ಹರಡುವ ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರಿಂದ ಅಹವಾಲು ಸ್ವೀಕಾರ ಬಳಿಕ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಏನು ಬೇಕಾದರೂ ಆರೋಪ ಮಾಡುತ್ತಾರೆ.
ಇಂದು ನಿನ್ನೆ ಕೊಟ್ಟ ಹೇಳಿಕೆಯನ್ನು ಟ್ವಿಸ್ಟ್ ಮಾಡಿ ಹೇಳಿದ್ದಾರೆ. ಮತಾಂಧ ಶಕ್ತಿಯನ್ನು ಅಪ್ರತ್ಯಕ್ಷವಾಗಿ ಬೆಂಬಲಿಸುತ್ತಾ ಕಾಂಗ್ರೆಸ್ ದೇಶದಲ್ಲಿ ಕಳೆದು ಹೋಗಿದೆ. ಮತೀಯ ಶಕ್ತಿಗಳ ಜೊತೆ ಆಟವಾಡುವ ಕೆಲಸ ಮಾಡಬಾರದು ಎಂದು ಕಿಡಿ ಕಾರಿದರು.
ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ಶಿವಮೊಗ್ಗ ಶಾಲೆಯಲ್ಲಿ ಕೇಸರಿ ಧ್ವಜ ಹಾರಿಸಿದ್ದಕ್ಕೆ ಎನ್ಎಸ್ಯುಐ ನಿಂದ ರಾಷ್ಟ್ರಧ್ವಜ ಹಾರಿಸಿದ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದರಿಂದ ಏನು ಸಾಧನೆ ಅಂತಾ ನನಗೆ ಅರ್ಥ ಆಗಲಿಲ್ಲ. ಅವರ ನಾಯಕರು ನಿನ್ನೆ ಧ್ವಜ ಅಲ್ಲಿ ಇತ್ತು ಅಂತಾ ಹೇಳಿದ್ದರು. ಇವತ್ತು ಅದನ್ನು ಇಡಲು ಹೊರಟಿದ್ದಾರೆ ಎಂದರು.
ಕಾಲೇಜುಗಳಿಗೆ ರಜೆ ಮುಂದುವರೆಸುವ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಮಾಡುತ್ತೇವೆ. ನಾನು, ಶಿಕ್ಷಣ ಸಚಿವರು ಮತ್ತು ಸಿಎಂ ಎಲ್ಲ ಸೇರಿ ತೀರ್ಮಾನ ಮಾಡುತ್ತೇವೆ. ನಂತರ ಕಾಲೇಜುಗಳಿಗೆ ರಜೆ ಮುಂದುವರೆಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ಬೆಂಗಳೂರಿನಲ್ಲಿ ಏನೂ ಸಮಸ್ಯೆ ಆಗಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಾಲೇಜುಗಳ ಬಳಿ ಸೆಕ್ಷನ್ ಹಾಕಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ರಾಜ್ಯ ಶಾಂತಿಯುತವಾಗಿದೆ ಎಂದರು.
ಭಗವತ್ ಧ್ವಜ ರಾಷ್ಟ್ರ ಧ್ವಜ ಆಗಬಹುದು ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಹೇಳಿಕೆ ಬಗ್ಗೆ ಅವರನ್ನರ ಕೇಳಿ ಹಿರಿಯ ಸಚಿವ ಇದ್ದಾರೆ. ಸಚಿವ ಈಶ್ವರಪ್ಪ ಹೇಳಿಕೆಗೆ ನನ್ನ ಪ್ರತಿಕ್ರಿಯೆ ಏನೂ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ : ರಜೆ ಮುಂದುವರಿಸುವ ಬಗ್ಗೆ ಇಂದು ನಿರ್ಧಾರವಿಲ್ಲ: ಸಿಎಂ ಜೊತೆ ಚರ್ಚಿಸಿ ತೀರ್ಮಾನ ಎಂದ ಸಚಿವ ನಾಗೇಶ್