ಕರ್ನಾಟಕ

karnataka

ETV Bharat / state

ಹಿಜಾಬ್ ಕುರಿತ ತೀರ್ಪು: ಮುಂದಿನ ಕಾನೂನು ಹೋರಾಟದ ಬಗ್ಗೆ ಅರ್ಜಿದಾರರ ಪರ ವಕೀಲರು ಹೇಳಿದ್ದೇನು? - ನೂನು ಹೋರಾಟ

ಹೈಕೋರ್ಟ್​​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಹೋಗಬೇಕಾ, ಬೇಡ್ವಾ ಅಂತ ವಿಚಾರ ಮಾಡಿ ನೋಡುತ್ತೇವೆ. ಈಗಲೇ ಏನೂ ಹೇಳಲು ಆಗುವುದಿಲ್ಲ ಎಂದು ವಕೀಲರು ಹೇಳಿದ್ದಾರೆ.

Lawyer
Lawyer

By

Published : Mar 15, 2022, 11:46 AM IST

Updated : Mar 15, 2022, 11:53 AM IST

ಬೆಂಗಳೂರು: ಶಾಲಾ-ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸುವಿಕೆ ನಿರ್ಬಂಧ ಎತ್ತಿ ಹಿಡಿದಿರುವ ಹೈಕೋರ್ಟ್​​ ಆದೇಶವನ್ನು ನಾವು ಸ್ವಾಗತಿಸುತ್ತೇವೆ ಎಂದು ಅರ್ಜಿದಾರರ ಪರ ವಕೀಲ ಶತಬೀಶ್ ಶಿವಣ್ಣ ಹೇಳಿದ್ದಾರೆ

ನ್ಯಾಯಾಲಯದ ತೀರ್ಪಿನ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ನ್ಯಾಯಾಲಯವು ಸರ್ಕಾರದ ಆದೇಶ ಸರಿ ಇದೆ ಎಂದಿದೆ. ನಮ್ಮ ರಿಟ್ ಜೊತೆ ಬೇರೆ ಎಲ್ಲ ರಿಟ್ ಅರ್ಜಿಗಳು ವಜಾ ಆಗಿವೆ ಎಂದರು.

ಹೈಕೋರ್ಟ್​​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಹೋಗಬೇಕಾ, ಬೇಡ್ವಾ ಅಂತ ವಿಚಾರ ಮಾಡಿ ನೋಡುತ್ತೇವೆ. ಈಗಲೇ ಏನೂ ಹೇಳಲು ಆಗುವುದಿಲ್ಲ. ಸತತ 11 ದಿನ ವಾದ-ಪ್ರತಿವಾದ ಆಲಿಸಿ ತೀರ್ಪು ನೀಡಿದೆ. ಆದೇಶದ ಪ್ರತಿ ಬರಬೇಕು. ಈ ಪ್ರತಿ ಸಿಕ್ಕ ಬಳಿಕ ಅದರಲ್ಲಿರುವ ಅಂಶಗಳನ್ನು ನೋಡಿ ಮುಂದೆ ಯಾವ ರೀತಿ ಕಾನೂನು ಹೋರಾಟ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಹಿಜಾಬ್​ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅಗತ್ಯತೆ ಅಲ್ಲ: ಹೈಕೋರ್ಟ್

Last Updated : Mar 15, 2022, 11:53 AM IST

ABOUT THE AUTHOR

...view details