ಬೆಂಗಳೂರು : ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮ 2020ರಲ್ಲಿ ಉಚ್ಛ ನ್ಯಾಯಾಲಯದ ಕಲಾಪಗಳು ಕಡಿಮೆಯಾದ ಹಿನ್ನೆಲೆ ಅದನ್ನು ಸರಿದೂಗಿಸಲು 2021ರಲ್ಲಿ ಒಟ್ಟು 11 ಶನಿವಾರ ಕಲಾಪ ನಡೆಸಲು ಹೈಕೋರ್ಟ್ ನಿರ್ಧರಿಸಿದೆ.
ಈ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ನೋಟಿಸ್ ಪ್ರಕಟಿಸಿದ್ದಾರೆ.
ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲ್ಬುರ್ಗಿ ಹೈಕೋರ್ಟ್ ಪೀಠಗಳಲ್ಲಿಯೂ ಕಲಾಪ ನಡೆಯಲಿದೆ. ಸಾಮಾನ್ಯವಾಗಿ ಶನಿವಾರದಂದು ಹೈಕೋರ್ಟ್ ನ್ಯಾಯಪೀಠಗಳು ಕಾರ್ಯನಿರ್ವಹಿಸುವುದಿಲ್ಲ.
ಕಲಾಪ ನಡೆಯಲಿರುವ ಶನಿವಾರಗಳು: 2021ರ ಜನವರಿ 16, ಫೆಬ್ರವರಿ 6, ಮಾರ್ಚ್ 6, ಏಪ್ರಿಲ್ 17, ಮೇ 29, ಜೂನ್ 19, ಜುಲೈ 24, ಆಗಸ್ಟ್ 7, ಸೆಪ್ಟೆಂಬರ್ 4, ಅಕ್ಟೋಬರ್ 23, ಡಿಸೆಂಬರ್ 18.