ಕರ್ನಾಟಕ

karnataka

ETV Bharat / state

ಡಿಕೆಶಿ ತಾಯಿಯನ್ನ ಸ್ವಗೃಹದಲ್ಲೇ ವಿಚಾರಣೆ ನಡೆಸುವಂತೆ ಇಡಿಗೆ ಹೈಕೋರ್ಟ್​ ಆದೇಶ - ಇಡಿಗೆ ಹೈಕೋರ್ಟ್​ ಸೂಚನೆ

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಅವರನ್ನು‌ ಕನಕಪುರದ ಸ್ವಗೃಹದಲ್ಲಿ ಜಾರಿ‌‌ ನಿರ್ದೇಶನಾಲಯ (ಇಡಿ) ಅಧಿಕಾರಿಗಳು‌ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ಆದೇಶಿಸಿದೆ.

DKShivkumar mother inquiry by ed , ಡಿಕೆಶಿ ತಾಯಿ ವಿಚಾರಣೆ
ಇಡಿಗೆ ಹೈಕೋರ್ಟ್​ ಸೂಚನೆ

By

Published : Dec 18, 2019, 5:54 PM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಅವರನ್ನು‌ ಕನಕಪುರದ ಸ್ವಗೃಹದಲ್ಲಿ ಜಾರಿ‌‌ ನಿರ್ದೇಶನಾಲಯ (ಇಡಿ) ಅಧಿಕಾರಿಗಳು‌ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ಆದೇಶಿಸಿದೆ.

ಕನಕಪುರದ ಸ್ವಗೃಹದಲ್ಲೇ ಗೌರಮ್ಮ ಅವರನ್ನು ಕನ್ನಡದಲ್ಲೇ ವಿಚಾರಣೆ ನಡೆಸಬೇಕು. ಈ ವೇಳೆ ವಿಚಾರಣೆಯ ಆಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಬೇಕು. ಇಡಿ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಲು ರಾಮನಗರ ಎಸ್ಪಿಗೆ ಸೂಚನೆ ನೀಡುವುದರ ಜೊತೆಗೆ‌ ವಿಚಾರಣೆಗೆ ಯಾರು ಅಡ್ಡಿಪಡಿಸುವಂತಿಲ್ಲ. ಯಾವುದೇ ಪ್ರತಿಭಟನೆ ಇತ್ಯಾದಿ ನಡೆಸುವಂತಿಲ್ಲ ಎಂದು ನ್ಯಾ. ನರೇಂದರ್ ಆದೇಶಿಸಿದ್ದಾರೆ.

ABOUT THE AUTHOR

...view details