ಬೆಂಗಳೂರು :ಕರ್ನಾಟಕ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರ ತಂದೆ ಜಿ.ಎಸ್ ಪಂಡಿತ್ (86) ಇಂದು ಇಹಲೋಕ ತ್ಯಜಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ಗೆ ಪಿತೃ ವಿಯೋಗ - Bangalore latest news
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರ ತಂದೆ ಜಿ.ಎಸ್.ಪಂಡಿತ್ ಇಂದು ನಿಧನ ಹೊಂದಿದ್ದಾರೆ.
ಜಿ.ಎಸ್.ಪಂಡಿತ್ ರಾಜ್ಯ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಬಳಿಕ ಕಾನೂನು ಅಭ್ಯಾಸ ಮಾಡಿ ಸುದೀರ್ಘ 20 ವರ್ಷಗಳ ಕಾಲ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(ಕೆಎಟಿ)ಯಲ್ಲಿ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ವಕೀಲ ವೃತ್ತಿ ನಿರ್ವಹಿಸಿದ್ದರು. ಅವರ ಪುತ್ರ ನ್ಯಾ.ಎಸ್.ಜಿ. ಪಂಡಿತ್ ಕರ್ನಾಟಕ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಿತೃ ವಿಯೋಗಕ್ಕೆ ಕಂಬನಿ ಮಿಡಿದಿರುವ ನ್ಯಾಯಮೂರ್ತಿ ಎಸ್.ಜಿ. ಪಂಡಿತ್, ನೀವು ಸಾಗಿಸಿದ ಸಕಾರಾತ್ಮಕ ಬದುಕಿನ ಬೆಳಕು ನಮ್ಮ ಜೀವನವನ್ನು ಪ್ರತಿದಿನ ಬೆಳಗಿಸುತ್ತದೆ. ಸಮರ್ಪಣೆಗೆ ಸಾಕಾರ ರೂಪ ಎಂಬತ್ತಿದ್ದ ನೀವು ನಮ್ಮೆಲ್ಲರಿಗೂ ಮಾದರಿ ಎಂದಿದ್ದಾರೆ.