ಕರ್ನಾಟಕ

karnataka

ETV Bharat / state

ಮುಂದುವರೆದ ಸಾರಿಗೆ ನೌಕರರ ಮುಷ್ಕರ.. ಭಿಕ್ಷಾಟನೆ ಚಳವಳಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ - ಬಿಗಿ ಪೊಲೀಸ್ ಬಂದೋಬಸ್ತ್

ತಟ್ಟೆ ಹಿಡಿದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಿ ಆಕ್ರೋಶ ಹೊರ ಹಾಕಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಮೇಕ್ರಿ ಸರ್ಕಲ್​ನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

high police alert in bangalore due to protest
ಮುಂದುವರೆದ ಸಾರಿಗೆ ನೌಕರರ ಮುಷ್ಕರ; ಭಿಕ್ಷಾಟನೆ ಚಳುವಳಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್!

By

Published : Apr 13, 2021, 12:35 PM IST

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯಿಂದ ಸರ್ಕಾರಕ್ಕೆ ಮುಜುಗರ ತರುವಂತಹ ವಿಭಿನ್ನ ರೀತಿಯ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ.‌

ಬಿಗಿ ಪೊಲೀಸ್ ಬಂದೋಬಸ್ತ್

ಇಂದು ಕೂಡ ವಿಭಿನ್ನ ರೀತಿಯಲ್ಲಿ ಮುಷ್ಕರ ನಡೆಸಲು ಸಾರಿಗೆ ನೌಕರರು ತೀರ್ಮಾನ ಮಾಡಿದ್ದು, ತಟ್ಟೆ ಹಿಡಿದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಲಿದ್ದಾರೆ. ನಗರದ ಮೇಕ್ರಿ ಸರ್ಕಲ್ ಸೇರಿದಂತೆ ಮುಖ್ಯ ಸರ್ಕಲ್​​ಗಳಲ್ಲಿ ಸಾರಿಗೆ ಸಿಬ್ಬಂದಿಯಿಂದ ವಿಭಿನ್ನ ಚಳವಳಿ ನಡೆಯಲಿದೆ.

ಇದನ್ನೂ ಓದಿ:ಮುಷ್ಕರದ ನಡುವೆ ಕೆಲಸಕ್ಕೆ ಹಾಜರಾದ ನೌಕರರಿಗೆ ಅಭಿನಂದನಾ ಪತ್ರ ನೀಡಿದ ಬಿಎಂಟಿಸಿ

ಭಿಕ್ಷಾಟನೆ ಚಳವಳಿ ಹಿನ್ನೆಲೆ ಮೇಕ್ರಿ ಸರ್ಕಲ್​ನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, 80ಕ್ಕೂ ಹೆಚ್ಚು ಪೊಲೀಸರು ಹಾಗೂ 1 ಕೆಎಸ್ಆರ್​ಪಿ ತುಕಡಿ , ಒಬ್ಬರು ಇನ್ಸ್​​ಪೆಕ್ಟರ್​​ ಅನ್ನು ನಿಯೋಜನೆ ಮಾಡಲಾಗಿದೆ. ಎಸಿಪಿ ಪೃಥ್ವಿ ನೇತೃತ್ವದಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ.

ABOUT THE AUTHOR

...view details