ಬೆಂಗಳೂರು :ನವೆಂಬರ್ 15ರಿಂದ ನಡೆಯಬೇಕಿದ್ದ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ (state Law University Exams) ಹೈಕೋರ್ಟ್ (High court) ಮಧ್ಯಂತರ ತಡೆಯಾಜ್ಞೆ ನೀಡಿದೆ. ಡಿಸೆಂಬರ್ 15ರವರೆಗೆ ತಡೆಯಾಜ್ಞೆ ಇರುವುದರಿಂದ ಅಲ್ಲಿಯವರೆಗೂ ವಿವಿ ಪರೀಕ್ಷೆಗಳು ರದ್ದಾದಂತಾಗಿವೆ.
ಯುಜಿಸಿ (UGC) ನಿರ್ದೇಶನದ ಅನುಸಾರ ಕೋವಿಡ್ ಸಂದರ್ಭದಲ್ಲಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ಗಳಿಗೆ ಬಡ್ತಿ ನೀಡಬೇಕಿತ್ತು.
ಆದರೆ, ವಿವಿ ಪರೀಕ್ಷೆ (KSLU) ನಡೆಸಲು ಮುಂದಾಗಿದ್ದು, ಈ ಕ್ರಮ ಸರಿಯಲ್ಲ ಎಂದು ನವೀನ್ ಕುಮಾರ್ ಸೇರಿದಂತೆ 10 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.