ಕರ್ನಾಟಕ

karnataka

ETV Bharat / state

ಬಾಗ್ಮನೆ ಟೆಕ್​ಪಾರ್ಕ್​ ಒತ್ತುವರಿ ಪ್ರಕರಣ: ಲೋಕಾಯುಕ್ತ ವಿಚಾರಣೆಗೆ ಹೈಕೋರ್ಟ್ ತಡೆ, ಪ್ರತಿವಾದಿಗಳಿಗೆ ನೋಟಿಸ್ - Samaj Parivartan Community organiser S R Hiremath

ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್​ ಆರ್ ಹಿರೇಮಠ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ವಿಭಾಗೀಯ ಪೀಠ, ಪ್ರಕ್ರಿಯೆಗೆ ತಡೆ ನೀಡಿ ವಿಚಾರಣೆ ಮುಂದೂಡಿತು. ಅಲ್ಲದೇ, ಕರ್ನಾಟಕ ಲೋಕಾಯುಕ್ತ, ಬಿಬಿಎಂಪಿ, ಪೌರಾಡಳಿತ ಇಲಾಖೆ, ಭಾಗ್ಮಾನೆ ಡೆವಲಪ್​​ಮೆಂಟ್​​ ಪ್ರೈವೇಟ್​ ಲಿಮಿಟೆಡ್​ಗೆ ನೋಟಿಸ್ ಜಾರಿ ಮಾಡಿತು.

ಹೈಕೋರ್ಟ್
ಹೈಕೋರ್ಟ್

By

Published : Sep 28, 2022, 3:17 PM IST

ಬೆಂಗಳೂರು: ನಗರದಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ವಿಷಯದಲ್ಲಿ ಮೆಸರ್ಸ್ ಬಾಗ್ಮನೆ ಡೆವಲಪ್​ಮೆಂಟ್​ ಪ್ರೈವೆಟ್​ ಲಿಮಿಟೆಡ್​ ಸಲ್ಲಿಸಿದ್ದ ದೂರಿನ ಅನ್ವಯ ಲೋಕಾಯುಕ್ತ ಪ್ರಾರಂಭಿಸಿರುವ ವಿಚಾರಣಾ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆ ನೀಡಿದೆ.

ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್​. ಆರ್ ಹಿರೇಮಠ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ವಿಭಾಗೀಯ ಪೀಠ, ಪ್ರಕ್ರಿಯೆಗೆ ತಡೆ ನೀಡಿ ವಿಚಾರಣೆ ಮುಂದೂಡಿತು. ಅಲ್ಲದೇ, ಕರ್ನಾಟಕ ಲೋಕಾಯುಕ್ತ, ಬಿಬಿಎಂಪಿ, ಪೌರಾಡಳಿತ ಇಲಾಖೆ, ಭಾಗ್ಮಾನೆ ಡೆವಲಪ್​​ಮೆಂಟ್​​ ಪ್ರೈವೇಟ್​ ಲಿಮಿಟೆಡ್​ಗೆ ನೋಟಿಸ್ ಜಾರಿ ಮಾಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕರ್ನಾಟಕ ಲೋಕಾಯುಕ್ತ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಆದರೆ, ಬಾಗ್ಮನೆ ಒತ್ತುವರಿ ಸಂಬಂಧ ಮಧ್ಯಪ್ರವೇಶಿಸಿ ಒತ್ತುವರಿ ತೆರವು ಮಾಡದಂತೆ ಸೂಚಿಸಿದೆ. ತನ್ನ ಅಧಿಕಾರ ವ್ಯಾಪ್ತಿ ಮೀರಿ ಲೋಕಾಯುಕ್ತ ಆದೇಶ ನೀಡಿದೆ.‌ ಈ ಪ್ರಕ್ರಿಯೆ ಹೈಕೋರ್ಟ್​ನ ನ್ಯಾಯಾಂಗ ಅಧಿಕಾರವನ್ನು ಪ್ರಶ್ನೆ ಮಾಡುವಂತಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಈ ವೇಳೆ, ಲೋಕಾಯುಕ್ತ ಪರ ವಕೀಲರು, ಈಗಾಗಲೇ ಕೆಲವು ಒತ್ತುವರಿ ತೆರವು ಪ್ರಕರಣಗಳಲ್ಲಿ ಹೈಕೋರ್ಟ್ ತಡೆ ನೀಡಿದೆ ಎಂದು ವಿವರಿಸಲು ಮುಂದಾದರು‌. ಆದರೆ, ಹೈಕೋರ್ಟ್ ಪ್ರಕರಣ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ ಏನು?: ಮಳೆಯಿಂದ ರಾಜಧಾನಿ ಬೆಂಗಳೂರು ನಗರದಲ್ಲಿ ಉಂಟಾಗಿದ್ದ ಸಮಸ್ಯೆಗಳ ಪರಿಹಾರಕ್ಕೆ ಬಿಬಿಎಂಪಿ ಮುಂದಾಗಿತ್ತು. ಈ ನಡುವೆ ಮೆಸ್​ ಭಾಗ್ಮನೆ ಡೆವಲಪ್​ಮೆಂಟ್​ ಪ್ರೈವೇಟ್​ ಲಿಮಿಟೆಡ್​ ನಿಂದ ಸೆ. 11ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿ ಭಾಗ್ಮಾನೆ ಟೆಕ್​ ಪಾರ್ಕ್​ನ ಕಾಂಪೌಂಡ್​ ಮತ್ತು ಚರಂಡಿಯ ಮೇಲಿನ ಕಲ್ಲುಗಳನ್ನು ಪಾಲಿಕೆ ಅಧಿಕಾರಿಗಳು ತೆಗೆಯುವ ಬಗ್ಗೆ ಆತಂಕವಿದೆ ಎಂದು ಮನವಿ ಮಾಡಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ್ದ ಲೋಕಾಯುಕ್ತರು, ಬಾಗ್ಮನೆ ಟೆಕ್​ ಪಾರ್ಕ್​ನ ಒತ್ತುವರಿ ತೆರವು ಮಾಡಿದಲ್ಲಿ ಈ ಭಾಗದಲ್ಲಿನ ನೆರೆಹೊರೆಯರ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಹೀಗಾಗಿ ತೆರವು ಮಾಡದಂತೆ ಸೂಚಿಸಿದ್ದರು. ಈ ರೀತಿಯಲ್ಲಿ ಸೂಚನೆ ನೀಡಲು ಲೋಕಾಯುಕ್ತರಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಬಾಗ್ಮನೆ ಒತ್ತುವರಿಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ದೂರಿನ ಸಂಬಂಧದ ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ಅರ್ಜಿದಾರರು ಮನವಿ ಅರ್ಜಿಯಲ್ಲಿ ಮಾಡಿದ್ದರು.

ಓದಿ:ಬಿಎಂಎಸ್​ ಟ್ರಸ್ಟ್​ ಅಕ್ರಮದ ಬಗ್ಗೆ ಮೋದಿಗೆ ದಾಖಲೆ ಕಳುಹಿಸುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

ABOUT THE AUTHOR

...view details